ದೀಪಾವಳಿಯಂದು ಕೆಲವು ವಸ್ತುಗಳನ್ನು ದಾನ ಮಾಡುವುದರಿಂದ ಲಕ್ಷ್ಮೀದೇವಿ ಕೋಪಗೊಂಡು ದಾರಿದ್ರ್ಯ ಬರಬಹುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ಹಿಂದೂ ಧರ್ಮದ ಬಹುದೊಡ್ಡ ಹಬ್ಬಗಳಲ್ಲಿ ಒಂದು ದೀಪಾವಳಿ. ಇಡೀ ದೇಶದ ತುಂಬೆಲ್ಲಾ ದೀಪಾವಳಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಈ ವರ್ಷ ಅಕ್ಟೋಬರ್ 31ರಂದು ದೀಪಾವಳಿ ಆಚರಿಸಲಾಗುತ್ತಿದೆ. ಹಬ್ಬದಂದು ಮಹಾಲಕ್ಷ್ಮೀಯನ್ನು ಪೂಜಿಸಿ, ಸಿಹಿ ಹಂಚುವ ಮೂಲಕ ಶುಭಾಶಯಗಳನ್ನು ತಿಳಿಸಲಾಗುತ್ತದೆ. ಆದ್ರೆ ದೀಪಾವಳಿಯಂದು ಕೆಲ ವಸ್ತುಗಳನ್ನು ಯಾವುದೇ ಕಾರಣಕ್ಕೂ ದಾನವಾಗಿ ನೀಡಬಾರದು. ಇದರಿಂದ ಲಕ್ಷ್ಮೀದೇವಿ ಕೋಪಗೊಳ್ಳುತ್ತಾಳೆ. ನಿಮ್ಮ ಮೇಲೆ ಲಕ್ಷ್ಮೀದೇವಿ ಕೋಪಗೊಂಡರೆ ಆರ್ಥಿಕ ಪರಿಸ್ಥಿತಿ ಕುಸಿದು, ದಟ್ಟ ದಾರಿದ್ರ್ಯತೆ ನಿಮ್ಮನ್ನು ಆವರಿಸುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ದೀಪಾವಳಿಯಂದು ಯಾವುದೇ ವಸ್ತುವನ್ನು ದಾನವಾಗಗಿ ನೀಡುವ ಮೊದಲು ನಿಮ್ಮ ಆರ್ಥಿಕ ಪರಿಸ್ಥಿತಿ ಏನು ಎಂಬುದನ್ನು ತಿಳಿದುಕೊಂಡಿರಬೇಕು. ಈ ಶುಭ ದಿನದಂದು ಕೆಲವು ವಸ್ತುಗಳನ್ನು ದಾನವಾಗಿ ನೀಡುವುದು ಉಚಿತವಲ್ಲ. ಕೆಲ ವಸ್ತುಗಳನ್ನು ದಾನವಾಗಿ ನೀಡುವುದರಿಂದ ಅದು ನಿಮಗೆ ಲಾಭದಾಯಕವಾಗುತ್ತದೆ. ಹಾಗಾದ್ರೆ ದಾನ ನೀಡಬಾರದು ಆ ವಸ್ತುಗಳು ಯಾವವು ಎಂಬುದನ್ನು ನೋಡೋಣ ಬನ್ನಿ.
undefined
ದೀಪಾವಳಿಯಂದು ದಾನ ನೀಡಬಾರದ ವಸ್ತುಗಳು
1.ಎಣ್ಣೆ ಮತ್ತು ತುಪ್ಪ: ಬೆಂಕಿ ಹಚ್ಚುವ ಉತ್ಪನ್ನಗಳನ್ನು ದೀಪಾವಳಿಯಂದು ದಾನವಾಗಿ ನೀಡಬಾರದು. ದೀಪದ ಎಣ್ಣೆ ಮತ್ತು ತುಪ್ಪದಿಂದ ಬೆಂಕಿ ಹಚ್ಚಬಹುದು. ಹಾಗಾಗಿ ಈ ವಸ್ತುಗಳನ್ನು ದಾನವಾಗಿ ನೀಡಬೇಡಿ.
2.ಉಪ್ಪು: ದೀಪಾವಳಿಯಂದು ಅಪ್ಪಿತಪ್ಪಿಯೂ ಉಪ್ಪನ್ನು ದಾನ ಅಥವಾ ಸಾಲವಾಗಿ ನೀಡಬಾರದು. ಈ ಸಂದರ್ಭದಲ್ಲಿ ಉಪ್ಪು ದಾನವಾಗಿ ನೀಡುವದರಿಂದ ಸಂಬಂಧಗಳಲ್ಲಿ ಬಿರುಕು ಮೂಡುವ ಸಾಧ್ಯತೆ ಇರುತ್ತದೆ.
3.ಹಣ: ದೀಪಾವಳಿ ದಿನ ಅಥವಾ ಸಂಜೆ ಹಣದ ವ್ಯವಹಾರ ನಡೆಸೋದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಹಬ್ಬದ ಸಂದರ್ಭದಲ್ಲಿ ಮನೆಯಿಂದ ಹಣ ಹೊರಗೆ ಕಳುಹಿಸಬಾರದು ಅಥವಾ ಯಾವುದೇ ಬಾಕಿ ಮೊತ್ತವನ್ನು ಈ ದಿನ ಪಾವತಿಸಬಾರದು. ಹೀಗೆ ಮಾಡಿದ್ರೆ ನೀವು ಲಕ್ಷ್ಮೀದೇವಿಯ ಕೋಪಕ್ಕೆ ತುತ್ತಾಗಬೇಕಾಗುತ್ತದೆ.
4.ಕಬ್ಬಿಣದ ವಸ್ತುಗಳು: ದೀಪಾವಳಿಯಂದು ಕಬ್ಬಿಣದ ವಸ್ತುಗಳನ್ನು ದಾನ ಅಥವಾ ಎರವಲು ನೀಡುವುದು ಅಶುಭದ ಸೂಚನೆ ಎಂದು ಪರಿಗಣಿಸಲಾಗುತ್ತದೆ. ಕಬ್ಬಿಣದ ವಸ್ತುಗಳೊಂದಿಗೆ ರಾಹುವಿನ ಸಂಬಂಧ ಇರುತ್ತದೆ. ಈ ಕಾರಣದಿಂದ ಕಬ್ಬಿಣದ ವಸ್ತುಗಳನ್ನು ದಾನವಾಗಿ ನೀಡಬಾರದು.
5.ಕಪ್ಪು ಬಣ್ಣದ ವಸ್ತು: ದೀಪಾವಳಿ ದಿನ ಕಪ್ಪು ಬಣ್ಣದ ಯಾವುದೇ ವಸ್ತು ದಾನವಾಗಿ ನೀಡಬಾರದು. ಇದರಿಂದ ನಕಾರಾತ್ಮಕ ಶಕ್ತಿಯು ಪ್ರವೇಶವಾಗಿ ದೌರ್ಭಾಗ್ಯ ಉಂಟಾಗುತ್ತದೆ.
6.ಮುರಿದ/ಹಾನಿಗೊಳಗಾದ ವಸ್ತುಗಳು: ಮುರಿದ ಅಥವಾ ಹಾನಿಗೊಳಗಾದ ವಸ್ತುಗಳನ್ನು ದಾನವಾಗಿ ನೀಡಿದರೆ ಅದು ಅಸಫಲತೆ ಮತ್ತು ದೌರ್ಭಾಗ್ಯವನ್ನು ಆಕರ್ಷಣೆ ಮಾಡುತ್ತದೆ. ಈ ಕಾರಣದಿಂದ ದೀಪಾವಳಿಯಂದು ಡ್ಯಾಮೇಜ್ ವಸ್ತುಗಳನ್ನು ದಾನವಾಗಿ ನೀಡಬಾರದು.
ಇದನ್ನೂ ಓದಿ:ದೀಪಾವಳಿ 2024 ರಾಶಿ ಭವಿಷ್ಯ: ಈ 4 ರಾಶಿಯವರಿಗೆ ಶುರುವಾಗಲಿದೆ ಒಳ್ಳೆಯ ದಿನಗಳು
ದೀಪಾವಳಿ ದಿನ ದಾನವಾಗಿ ನೀಡಬೇಕಾದ ವಸ್ತುಗಳು
ಬಡವರು, ನಿರ್ಗತಿಕರಿಗೆ ದೀಪಾವಳಿ ಸಂದರ್ಭದಲ್ಲಿ ಆಹಾರ ಸಾಮಾಗ್ರಿಗಳನ್ನು ದಾನವಾಗಿ ನೀಡುವುದರಿಂದ ಅನ್ನಪೂರ್ಣೇಶ್ವರಿಯ ಕೃಪೆಗೆ ಪಾತ್ರರಾಗುತ್ತೀರಿ. ಹಾಗೆಯೇ ಕಪ್ಪು ಬಣ್ಣ ಹೊರತುಪಡಿಸಿ ಬೇರೆ ಬಣ್ಣದ ಬಟ್ಟೆ ಕೊಡಬಹುದು. ಹಣ್ಣು ಮತ್ತು ಸಿಹಿಯನ್ನು ದಾನವಾಗಿ ನೀಡುವುದನ್ನು ಸಮೃದ್ಧಿಯ ಸಂಕೇತ ಎಂದು ಪರಿಗಣಿಸಲಾಗುತ್ತದೆ.
(Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರೋ ಮಾಹಿತಿಯನ್ನು ಆಧರಿಸಿದೆ. ಹಾಗಾಗಿ ಇಲ್ಲಿರುವ ಮಾಹಿತಿಯನ್ನು ಏಷ್ಯಾನೆಟ್ ನ್ಯೂಸ್ ಖಚಿತಪಡಿಸುವದಿಲ್ಲ)
ಇದನ್ನೂ ಓದಿ: ಹಿತಶತ್ರುಗಳ ಮಾಟ-ಮಂತ್ರದಿಂದ ಪಾರಾಗಲು ದೀಪಾವಳಿಯಂದು ಈ 4 ಕೆಲಸ ಮಾಡಿ