ರಾಮ್ ಚರಣ್ ಕ್ರೇಜ್‌ಗೆ ಸುಸ್ತಾದ ಅಜಿತ್‌, ವಿಕ್ರಮ್‌: ಸ್ಪರ್ಧೆಯಿಂದ ಹಿಂದೆ ಸರಿದ ತಮಿಳು ಚಿತ್ರರಂಗ!

First Published Oct 30, 2024, 8:18 PM IST

ತೆಲುಗು ಚಿತ್ರರಂಗದ ಖ್ಯಾತ ನಟ ಗ್ಲೋಬಲ್ ಸ್ಟಾರ್ ರಾಮ್ ಚರಣ್, ಶಂಕರ್ ಕಾಂಬಿನೇಷನ್‌ನಲ್ಲಿ ತಯಾರಾಗುತ್ತಿರುವ ಗೇಮ್ ಛೇಂಜರ್ ಚಿತ್ರ 2025ರ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಬೆಳ್ಳಿತೆರೆ ಮೇಲೆ ಅಪ್ಪಳಿಸಲು ಸಜ್ಜಾಗಿದೆ. ಭಾರೀ ನಿರೀಕ್ಷೆ ಹುಟ್ಟಿಸಿರುವ ಗೇಮ್ ಛೇಂಜರ್ ಚಿತ್ರದ ಸಮಯದಲ್ಲಿ ಬೇರೆ ಸಿನಿಮಾ ಬಿಡುಗಡೆ ಮಾಡದಿರಲು ಚಿತ್ರತಂಡದವರು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಗೇಮ್ ಛೇಂಜರ್ ಸಿನಿಮಾದೊಂದಿಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ತುಂಬಾ ಕಷ್ಟ ಎಂದು ಈ ನಿರ್ಧಾರಕ್ಕೆ ಬಂದಿದ್ದಾರಂತೆ. 

ಪ್ಯಾನ್ ಇಂಡಿಯಾ ಮಾರುಕಟ್ಟೆಗೆ ಇದೀಗ ತಮಿಳು, ತೆಲುಗು ಸ್ಟಾರ್ಸ್ ತಮ್ಮ ಚಿತ್ರಗಳ ಬಿಡುಗಡೆ ದಿನಾಂಕವನ್ನ  ಎಚ್ಚರಿಕೆಯಿಂದ ಯೋಜಿಸುತ್ತಿದ್ದಾರೆ. ನೆರೆ ರಾಜ್ಯಗಳಲ್ಲಿ ರಿಲೀಸ್ ಡೇಟ್‌ಗಳನ್ನು ನೋಡಿಕೊಂಡು ರಿಲೀಸ್ ಕ್ಯಾಲೆಂಡರ್ ಅನ್ನು ರೂಪಿಸುತ್ತಿದ್ದಾರೆ. ವಿಶೇಷವಾಗಿ ದೊಡ್ಡ ಬಜೆಟ್ ಸಿನಿಮಾಗಳು ತುಂಬಾ ಕಾಳಜಿಗಳನ್ನು ತೆಗೆದುಕೊಂಡು ಮಾರುಕಟ್ಟೆಗೆ ಇಳಿಯುತ್ತಿವೆ. ಇಲ್ಲದಿದ್ದರೆ ಭಾರೀ ಪ್ರಮಾಣದಲ್ಲಿ ನಷ್ಟವಾಗುವ ಸಾಧ್ಯತೆ ಇರುತ್ತದೆ. 

ಇನ್ನು ಓಟಿಟಿ ಸಂಸ್ಥೆಗಳು ಕೂಡ ತಮಗೆ ಇಷ್ಟ ಬಂದ ಸಮಯದಲ್ಲಿ ಚಿತ್ರಗಳನ್ನ ಬಿಡುಗಡೆ ಮಾಡಿದ್ದೇ ಆದಲ್ಲಿ ಅವರು ಕೇಳಿದ ರೇಟ್‌ ಕೂಡ ಕೊಡುವುದಿಲ್ಲ ಎಂದು ಹೇಳುತ್ತಿವಯಂತೆ. ಈ ಸಾರಿ ಸಂಕ್ರಾಂತಿಗೆ ಬಹಳಷ್ಟು ಎಚ್ಚರಿಕೆಯೊಂದಿಗೆ ತಮಿಳು, ತೆಲುಗು ಸಿನಿಮಾಗಳ ಡೇಟ್ಸ್ ಘೋಷಿಸುತ್ತಿವೆ. ರಾಮ್ ಚರಣ್ ಅಭಿಮಾನಿಗಳು ಕೂಡ ಗೇಮ್ ಛೇಂಜರ್ ಸಿನಿಮಾಗೆ ಬಹಳಷ್ಟು ಕಾತುರದಿಂದ ಕಾಯುತ್ತಿದ್ದಾರೆ. ಈ ಸಿನಿಮಾ ಜನವರಿ 10, 2025 ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡವೇ ಹೇಳಿಕೊಂಡಿದೆ. 

Latest Videos


ಗೇಮ್ ಛೇಂಜರ್‌ನೊಂದಿಗೆ ರೇಸ್‌ಗೆ ಇಳಿಯದಿರಲು ಬೇರೆ ಭಾಷೆಗಳ ಚಿತ್ರತಂಡದವರು ನಿರ್ಧರಿಸಿದ್ದಾರಂತೆ. ರೋಬೋ ಸೇರಿದಂತೆ ಮುಂತಾದ ಹಿಟ್ ಚಿತ್ರಗಳನ್ನ ನೀಡಿದ ಆರ್‌, ಶಂಕರ್ ನಿರ್ದೇಶನದ ಈ ಚಿತ್ರ ತಮಿಳು ಪ್ರೇಕ್ಷಕರಲ್ಲೂ ಕೂಡ ಭಾರೀ ನಿರೀಕ್ಷೆಯನ್ನು ಹುಟ್ಟಿಸಿದೆ. ಇದರೊಂದಿಗೆ ಕೆಲವು ತಮಿಳು ಚಿತ್ರ ನಿರ್ಮಾಣ ಸಂಸ್ಥೆಗಳು ಕೂಡ ಗೇಮ್ ಛೇಂಜರ್‌ ಬಿಡುಗಡೆಯ ಸಮಯದಲ್ಲಿ ತಮ್ಮ ಸಿನಿಮಾಗಳನ್ನ ಬಿಡುಗಡೆ ಮಾಡದಿರಲು ನಿರ್ಧರಿಸಿದ್ದಾರಂತೆ. 

ಡಿಸ್ಟ್ರಿಬ್ಯೂಟರ್ ಒಬ್ಬರು ಮಾಧ್ಯಮದವರೊಂದಿಗೆ ಮಾತನಾಡಿ, ರಾಮ್ ಚರಣ್, ಶಂಕರ್ ಕಾಂಬಿನೇಷನ್‌ ಕೂಡಿದೆ ಎಂದರೆ ಖಂಡಿತವಾಗಿಯೂ ಮಾರುಕಟ್ಟೆಯನ್ನೇ ತಮ್ಮದಾಗಿಸಿಕೊಳ್ಳುವ ವಾತಾವರಣ ಇರುತ್ತದೆ. ಹಾಗಾಗಿ ಆ ಟೈಂನಲ್ಲಿ ಆ ಸಿನಿಮಾದೊಂದಿಗೆ ಸ್ಪರ್ಧಿಸಿದರೆ ಸಿನಿಮಾದ ಆದಾಯ ಕಡಿಮೆಯಾಗಲಿದೆ. ಹೀಗಾಗಿ ಈ ಸ್ಪರ್ಧೆಯಿಂದ ಕೆಲ ತಮಿಳು ಸ್ಟಾರ್ಸ್‌ ಕೂಡ ಹಿಂದೆ ಸರಿಯುತ್ತಿದ್ದಾರೆ ಎಂದು ಹೇಳಿದ್ದಾರೆ. movie Game Changer song promo

ಮಾಧ್ಯಮಗಳ ವರದಿಯ ಪ್ರಕಾರ, ಅಜಿತ್ ಅಭಿನಯದ ಗುಡ್ ಬ್ಯಾಡ್ ಅಗ್ಲಿ ಸಿನಿಮಾದ ಬಿಡುಗಡೆಗೆ ಪ್ಲಾನ್ ಮಾಡಿದ್ದಾರೆ. ಆದರೆ ಅದನ್ನು ಈಗ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಬಿಡುಗಡೆ ಮಾಡಲು ಪ್ಲಾನ್‌ ಮಾಡಲಾಗಿದೆಯಂತೆ. ಇನ್ನು ವಿಕ್ರಮ್ ಅಭಿನಯದ ವೀರ ಧೀರ ಶೂರ ಚಿತ್ರ ಕೂಡ ಗೇಮ್ ಛೇಂಜರ್‌ನೊಂದಿಗೆ ಸ್ಪರ್ಧೆಗೆ ಇಳಿಯದಿರಲು ನಿರ್ಧರಿಸಿದೆಯಂತೆ. 

ಗ್ಲೋಬಲ್ ಸ್ಟಾರ್ ರಾಮ್ ಚರಣ್ ನಾಯಕ ನಟನಾಗಿ ನಟಿಸುತ್ತಿರುವ ಗೇಮ್ ಛೇಂಜರ್‌ ಸಿನಿಮಾ ಮೇಲೆ ಬಹಳಷ್ಟು ನಿರೀಕ್ಷೆ ಇಡಲಾಗಿದೆ.  ತಮಿಳುನ ಸ್ಟಾರ್ ನಿರ್ದೇಶಕ ಶಂಕರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ರಾಮ್ ಚರಣ್‌ಗೆ ಬಾಲಿವುಡ್ ಬ್ಯೂಟಿ ಕಿಯಾರಾ ಅದ್ವಾನಿ ನಾಯಕಿಯಾಗಿ ನಟಿಸಿದ್ದಾರೆ.

South Celebrities

ಪ್ಯಾನ್ ಇಂಡಿಯಾ ಈ ಸಿನಿಮಾದಲ್ಲಿ ರಾಮ್ ಚರಣ್‌ ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರವು ಖಂಡಿತವಾಗಿಯೂ ಭಾರೀ ಯಶಸ್ಸನ್ನು ತಂದುಕೊಡಲಿ ಎಂದೇ ಭಾವಿಸಲಾಗಿದೆ. ಬಿಸಿನೆಸ್ ಡೀಲ್ಸ್ ಕೂಡ ಭಾರೀ ಪ್ರಮಾಣದಲ್ಲಿ ನಡೆಯುತ್ತಿದೆ.

click me!