ಅತ್ತ ಅನರ್ಹರು ಬಿಜೆಪಿ ಸೇರ್ಪಡೆ: ಇತ್ತ ಹಠ ಸಾಧಿಸಿದ ಶರತ್ ಬಚ್ಚೇಗೌಡ

Nov 14, 2019, 6:38 PM IST

ಬೆಂಗಳೂರು/ಹೊಸಕೋಟೆ, [ನ.14]:  ಬಿಜೆಪಿ ವಿರುದ್ಧ ತೊಡೆ ತಟ್ಟಿರುವ ಸಂಸದ ಬಿ.ಎಸ್.ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ ಕೊನೆಗೂ ಹಠ ಸಾಧಿಸಿಯೇ ಬಿಟ್ಟರು. ಉಪಚುನಾವಣೆಗೆ ನಿಲ್ಲುವುದು ಬೇಡ ಎಂದು ಬಿಜೆಪಿ ನಾಯಕರು ಸಾಕಷ್ಟು ಮನವೋಲಿಸಿದರು. ಸಾಲದಕ್ಕೆ ಗೃಹ ಮಂಡಳಿ ಅಧ್ಯಕ್ಷ ಹುದ್ದೆಯನ್ನು ಬಿಜೆಪಿ ಆಫರ್ ಮಾಡಿದ್ರು.

 ರಂಗೇರಿದ ಉಪಸಮರ: ಅಪ್ಪನ ಶತ್ರುತ್ವ ಮರೆತು ಮಗನಿಗೆ ಬೆಂಬಲ ಘೋಷಿಸಿದ JDS

ಅದ್ಯಾವುದಕ್ಕೂ ಶರತ್ ಬಚ್ಚೇಗೌಡ ಬಗ್ಗಲೇ ಇಲ್ಲ. ಹೇಳಿದಂತೆ ಶರತ್ ಬಚ್ಚೇಗೌಡ್ರು ಇಂದು [ಗುರುವಾರ] ಸಹಸ್ರಾರು ಜನಸಂಖ್ಯೆ ಸಮ್ಮುಖದಲ್ಲಿ ರ್ಯಾಲಿ ಮೂಲಕ ನಾಪತ್ರಸಲ್ಲಿಸಿದರು.  ಬೆಂಗಳೂರಲ್ಲಿ ಅನರ್ಹ ಶಾಸಕರು ಬಿಜೆಪಿ ಸೇರ್ಪಡೆ ಜೋರಾಗಿದ್ರೆ, ಅತ್ತ ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ಶಕ್ತಿ ಪ್ರದರ್ಶನ ಹೇಗಿತ್ತು ಎನ್ನುವುದನ್ನು ವಿಡಿಯೋನಲ್ಲಿ ನೋಡಿ.

ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.