ಗದ್ದೆಗಿಳಿದ ಬಿಜೆಪಿ ಸಾರಥಿ: ರಾಜಕೀಯಕ್ಕೂ ಸೈ, ಕೃಷಿಗೂ ಜೈ

Jul 15, 2021, 5:57 PM IST

ಮಂಗಳೂರು, (ಜುಲೈ.15): ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್​ ಕಟೀಲ್ ಅವರು ಮಂಗಳವಾರ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನೈತಾಡಿ ಗ್ರಾಮದ ಗದ್ದೆಯಲ್ಲಿ ಭತ್ತದ ನಾಟಿ ಕೆಲಸ ಮಾಡಿದರು.

ಉಡುಪಿ: ಹಡಿಲು ಭೂಮಿ ಕೃಷಿ ನಾಟಿ ಕಾರ್ಯಕ್ಕೆ ಚಾಲನೆ

ಹತ್ತಾರು ವರ್ಷಗಳಿಂದ ಕೃಷಿ ಕಾರ್ಯವನ್ನೇ ಮಾಡದೇ ಪಾಳು ಬಿದ್ದಿರೋ ಭೂಮಿಗಳು. ಬಂಗಾರದ ಬೆಳೆ ತೆಗೆಯಬಹುದಾದ ಆ ಭೂಮಿಯಲ್ಲಿ ಕೃಷಿ ಚಟುವಟಿಕೆಯೇ ಸಂಪೂರ್ಣ ಸ್ಥಗಿತಗೊಂಡಿತ್ತು. ಹೀಗಾಗಿ ಜಿಲ್ಲೆಯ ಹಡೀಲು ಭೂಮಿಗಳಲ್ಲಿ ಭತ್ತ ಬೆಳೆಯೋ ಆಶಯದೊಂದಿಗೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಇಟ್ಟ ಹೆಜ್ಜೆಯೊಂದು ಸದ್ಯ ಜಿಲ್ಲೆಯಲ್ಲಿ ಕೃಷಿ ಕಾರ್ಯಕ್ಕೆ ಮುನ್ನುಡಿ ಬರೆದಿದೆ.

ಅಲ್ಲದೇ ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷರೇ ರಾಜಕೀಯ ಜಂಜಾಟ ಬಿಟ್ಟು ಗದ್ದೆಗಿಳಿದು ಕೃಷಿ ಕೆಲಸ ಮಾಡೋ ಮೂಲಕ ಮಾದರಿ ಹೆಜ್ಜೆ ಇಟ್ಟಿದ್ದಾರೆ..