Oct 29, 2023, 3:48 PM IST
ರಾಜಕೀಯ ಅಂದ್ರೆ ರಹಸ್ಯಗಳ ಅಕ್ಷಯ ಪಾತ್ರೆ. ಅಲ್ಲಿಂದ ಬಗೆದಷ್ಟೂ ರಹಸ್ಯಗಳು ಮತ್ತೆ ಮತ್ತೆ ಎದ್ದು ಬರ್ತಾನೇ ಇರುತ್ತವೆ. ಅಂಥದ್ದೇ ಒಂದು ರೋಚಕ ರಹಸ್ಯ ಕಾಂಗ್ರೆಸ್(Congress) ಪಾಳೆಯದಿಂದ ಅಪ್ಪಳಿಸಿ ಬಂದಿದೆ. ರಾಜಕೀಯ ಅಂದ್ರೆ, ತೆರೆಯ ಮೇಲೆ ಕಾಣೋದೇ ಬೇರೆ, ತೆರೆಯ ಹಿಂದೆ ನಡೆಯೋದೇ ಬೇರೆ. ಸಾಮಾನ್ಯವಾಗಿ ಆಂತರಿಕ ಬೇಗುದಿ ಇರೋ ಕಡೆ ಸಂಘರ್ಷ ಇದ್ದೇ ಇರುತ್ತೆ. ಅಂಥಾ ಬೇಗುದಿ ಬಿಜೆಪಿಯಲ್ಲೂ ಇದೆ, ಜೆಡಿಎಸ್‌ನಲ್ಲೂ ಇದೆ. ಆದ್ರೆ ಸಂಘರ್ಷ ಕಾಣ್ತಿರೋದು ಮಾತ್ರ ಕಾಂಗ್ರೆಸ್‌ನಲ್ಲಿ. ಸರ್ಕಾರಕ್ಕೆ 136 ಶಾಸಕರ (MLAs)ಪ್ರಚಂಡ ಬಲ. ತಿಪ್ಪರಲಾಗ ಹೊಡೆದ್ರೂ, ಹೊಡೆದುರುಳಿಸಲಾಗದ ಅಸೀಮ ಶಕ್ತಿ. ಇಷ್ಟಾದ್ರೂ ಕಾಂಗ್ರೆಸ್ ಪಾಳೆಯದಲ್ಲಿ ಎಲ್ಲವೂ ಸರಿಯಲ್ಲ. ಅದ್ರಲ್ಲೂ ಕಳೆದ ಎರಡು ದಿನಗಳಿಂದ ಕಾಂಗ್ರೆಸ್ ಶಾಸಕರು, ಮಂತ್ರಿಗಳು ಭಾರೀ ಸದ್ದು ಮಾಡ್ತಿದ್ದಾರೆ. ಕೆಲವರು ಸಿಎಂ ಯುದ್ಧಕ್ಕೆ ಇಳಿದಿದ್ದಾರೆ, ಇನ್ನು ಕೆಲವರು ಆಪರೇಷನ್ ಬಾಂಬ್(Operation bomb) ಹಾಕ್ತಿದ್ದಾರೆ. ಮತ್ತೆ ಕೆಲವರು ರಾತ್ರೋ ರಾತ್ರಿ ಒಂದೆಡೆ ಸೇರಿ ಡಿನ್ನರ್ ಪಾಲಿಟಿಕ್ಸ್(Dinner politics) ಮಾಡ್ತಿದ್ದಾರೆ. ಮಂಡ್ಯದ ಕಾಂಗ್ರೆಸ್ ಶಾಸಕ ಗಣಿಗ ರವಿ ಹೀಗಂತ ಸಣ್ಣದೊಂದು ಬಾಂಬ್ ಹಾಕ್ತಾರೆ. ಕಾಂಗ್ರೆಸ್ ಸರ್ಕಾರವನ್ನು ತೆಗೆಯಲು ಬಿಜೆಪಿಯ ಟೀಮ್ ಒಂದು ತೆರೆಮರೆಯಲ್ಲಿ ಆಪರೇಷನ್ ಮಾಡ್ತಾ ಇದೆ ಅನ್ನೋ ಸ್ಫೋಟಕ ಹೇಳಿಕೆ ಕೊಡ್ತಾರೆ. ಗಣಿಗ ರವಿ ಹೇಳಿಕೆಗೆ ಮತ್ತೊಬ್ಬ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಧ್ವನಿಗೂಡಿಸ್ತಾರೆ.
ಇದನ್ನೂ ವೀಕ್ಷಿಸಿ: ನಿರ್ನಾಮವಾಗುತ್ತಾ ಹಮಾಸ್ ಉಗ್ರ ಸಂತತಿ ? 700 ಕೋಟಿ ಮೊತ್ತದಲ್ಲಿ ಸಿದ್ಧವಾದ ಉಗ್ರ ಸುರಂಗ!