ಹರಿಪ್ರಸಾದ್ ಪಿಂಪ್‌ ಎಂದ ಬಿ.ಸಿ. ಪಾಟೀಲ್‌ಗೆ ಕಾಂಗ್ರೆಸ್‌ ನಾಯಕನ ತಿರುಗೇಟು..!

Jan 18, 2023, 1:31 PM IST

ಬಿಜೆಪಿಗೆ ವಲಸೆ ಬಂದಿರುವ ಶಾಸಕರನ್ನು ವೇಶ್ಯೆಯರು ಎಂಬ ಕಾಂಗ್ರೆಸ್‌ ನಾಯಕ ಬಿ.ಕೆ. ಹರಿಪ್ರಸಾದ್‌ ಹೇಳಿಕೆಗೆ ಸಚಿವ ಬಿ.ಸಿ. ಪಾಟೀಲ್‌ ತಿರುಗೇಟು ಕೊಟ್ಟಿದ್ದಾರೆ. ಹರಿಪ್ರಸಾದ್‌ ಪಿಂಪ್‌ ಎಂದು ಸಚಿವರು ಹೇಳಿದ್ದು, ಇದಕ್ಕೆ ವಿಧಾನ ಪರಿಷತ್‌ ವಿಪಕ್ಷ ನಾಯಕ ಹರಿಪ್ರಸಾದ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರಿಗೆ ಗಂಡಸ್ತನ ಇದ್ದರೆ ಪಿಂಪ್‌ ಎನ್ನುವುದನ್ನು ಪ್ರೂವ್‌ ಮಾಡಲಿ ಎಂದು ಸಚಿವ ಬಿ.ಸಿ. ಪಾಟೀಲ್‌ಗೆ ಎಂಎಲ್‌ಸಿ ಹರಿಪ್ರಸಾದ್‌ ಸವಾಲು ಹಾಕಿದ್ದಾರೆ. ಮಾಜಿ ಚಿತ್ರನಟ, ನಿರ್ಮಾಪಕ ತಮ್ಮ ಘಟನತೆಗೆ ತಕ್ಕ ಹೇಳಿಕೆ ಕೊಟ್ಟಿದ್ದಾರೆ ಎಂದೂ ಹರಿಪ್ರಸಾದ್‌ ಬಿ.ಸಿ. ಪಾಟೀಲ್‌ ವಿರುದ್ಧ ಹೇಳಿಕೆ ನೀಡಿದ್ದಾರೆ.