
ನವದೆಹಲಿ(ಏ.25): ಅಮೆರಿಕದಲ್ಲಿರುವ ಪಿತ್ರಾರ್ಜಿತ ಆಸ್ತಿ ತೆರಿಗೆ ಪದ್ಧತಿಯನ್ನು ಭಾರತದಲ್ಲೂ ಅಳವಡಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದ ಭಾರತೀಯ ಕಾಂಗ್ರೆಸ್ ಅನಿವಾಸಿ ಒಕ್ಕೂಟದ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷ ಅಂತರ ಕಾಯ್ದುಕೊಂಡಿದೆ. ‘ಪಿತ್ರಾರ್ಜಿತ ಆಸ್ತಿ ಪದ್ಧತಿ ಜಾರಿ ಮಾಡುವ ಯಾವುದೇ ಯೋಚನೆ ಇಲ್ಲ. ಆದರೆ ಇದರ ಮರುಜಾರಿಗೆ ಮೋದಿ ಸರ್ಕಾರ 3 ಬಾರಿ ಯತ್ನಿಸಿತ್ತು’ ಎಂದು ಸ್ಪಷ್ಟಪಡಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಪಕ್ಷದ ಕಾರ್ಯದರ್ಶಿ ಜೈರಾಂ ರಮೇಶ್, ‘ಸ್ಯಾಮ್ ಪಿತ್ರೋಡಾ ಅವರು ಅತ್ಯಂತ ಪ್ರಬುದ್ಧರಾಗಿದ್ದು, ಹಲವಾರು ವಿಷಯಗಳಲ್ಲಿ ಭಾರತಕ್ಕೆ ತಮ್ಮದೇ ಅದ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಅವರು ಭಾರತದ ಏಳಿಗೆಗೆ ಸಂಬಂಧಿಸಿದ ವಿಚಾರಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಮುಕ್ತ ಸ್ವಾತಂತ್ರ್ಯ ಹೊಂದಿದ್ದಾರೆ. ಆದರೆ ಅವರ ಎಲ್ಲ ಹೇಳಿಕೆಗಳನ್ನು ಪಕ್ಷ ಒಪ್ಪಿಕೊಳ್ಳಬೇಕೆಂದೇನೂ ಇಲ್ಲ’ ಎಂದು ತಿಳಿಸಿದ್ದಾರೆ.
ಪಿತ್ರಾರ್ಜಿತ ಆಸ್ತಿ ತೆರಿಗೆ ಬಗ್ಗೆ ಮಾತನಾಡಿ ವಿವಾದವೆಬ್ಬಿಸಿದ ಸ್ಯಾಮ್ ಪಿತ್ರೋಡಾಗೆ ಇರೋ ಆಸ್ತಿ ಇಷ್ಟೊಂದಾ!?
ಅಲ್ಲದೆ, ‘ರಾಜೀವ್ ಗಾಂಧಿ ಈ ಕಾಯ್ದೆಯನ್ನು 40 ವರ್ಷ ಹಿಂದೆ ರದ್ದು ಮಾಡಿದ್ದರು. ಆದರೆ 2014ರಲ್ಲಿ ಅಂದಿನ ಮೋದಿ ಸರ್ಕಾರದ ವಿತ್ತ ಖಾತೆ ರಾಜ್ಯ ಸಚಿವ ಈ ಕಾಯ್ದೆ ಮರುಜಾರಿ ಮಾಡುವ ಇಂಗಿತ ವ್ಯಕ್ತಪಡಿದಿದ್ದರು. 2017ರಲ್ಲಿ ಕಾಯ್ದೆ ಮರುಜಾರಿ ಆಗಲಿದೆ ಎಂಬ ಪತ್ರಿಕಾ ವರದಿ ಪ್ರಕಟ ಆಗಿದ್ದವು. ಬಳಿಕ 2018ರಲ್ಲಿ ಪಿತ್ರಾರ್ಜಿತ ಆಸ್ತಿ ಕಾಯ್ದೆ ಹೊಗಳಿದ್ದರು’ ಎಂದಿದ್ದಾರೆ. ಇದೇ ವೇಳೆ ಪಿತ್ರೋಡಾ ವಿವಾದಕ್ಕೆ ಪ್ರತಿಕ್ರಿಯೆ ನೀಡಿ, ತಮ್ಮ ಹೇಳಿಕೆಯನ್ನು ಭಾರತೀಯ ಮಾಧ್ಯಮಗಳು ತಿರುಚಿವೆ ಎಂದು ಟ್ವೀಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.