ಬೆಂಗಳೂರು: 19 ದಿನದಲ್ಲಿ 1 ಲಕ್ಷ ಮತದಾರರು ಹೆಚ್ಚಳ

By Kannadaprabha News  |  First Published Apr 25, 2024, 6:36 AM IST

ಚುನಾವಣೆ ಘೋಷಣೆಯ ಬಳಿಕ ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರದ ಮತದಾರ ಪಟ್ಟಿಗೆ ಒಂದು ಲಕ್ಷ ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ.


ಬೆಂಗಳೂರು (ಏ.25): ಚುನಾವಣೆ ಘೋಷಣೆಯ ಬಳಿಕ ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರದ ಮತದಾರ ಪಟ್ಟಿಗೆ ಒಂದು ಲಕ್ಷ ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ.

ಮಾ.16 ರಂದು ಲೋಕಸಭಾ ಚುನಾವಣೆ ಘೋಷಣೆ ಬಳಿಕವೂ ಮತದಾರ ಪಟ್ಟಿಗೆ ಹೆಸರು ಸೇರ್ಪಡೆಗೆ ಚುನಾವಣಾ ಆಯೋಗ ಅವಕಾಶ ನೀಡಿದ್ದು. ಏ.4ರ ವರೆಗೆ ನಗರದ ಮೂರು ಲೋಕಸಭಾ ಕ್ಷೇತ್ರಗಳಿಗೆ 99,526 ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ. ಮಾ.16ಕ್ಕೆ 78,90,480 ಮತದಾರರಿದ್ದರು, ಇದೀಗ ಈ ಸಂಖ್ಯೆ 79,90,006ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಚುನಾವಣಾ ವಿಭಾಗ ಮಾಹಿತಿ ನೀಡಿದೆ.

Tap to resize

Latest Videos

undefined

ಲೋಕಸಭಾ ಚುನಾವಣೇ 2024: ಮತದಾನ ಚಲಾಯಿಸಲು ಇಲ್ಲಿವೆ 12 ಪರ್ಯಾಯ ದಾಖಲೆ!

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ 40,398, ಬೆಂಗಳೂರು ಕೇಂದ್ರದಲ್ಲಿ 34,841 ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ 24,287 ಹೊಸ ಮತದಾರರು ಮತದಾರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.ಮತದಾನಕ್ಕೆ 43 ಸಾವಿರ ಸಿಬ್ಬಂದಿ

ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳಿಗೆ ಏ.26 ರಂದು ನಡೆಯಲಿರುವ ಮತದಾನಕ್ಕೆ ಜಿಲ್ಲಾ ಚುನಾವಣಾ ಆಯೋಗ ಬುಧವಾರ ಅಂತಿಮ ಹಂತ ಸಿದ್ಧತೆ ನಡೆಸಿತು. ಮತದಾನ ಕಾರ್ಯಕ್ಕೆ ನಿಯೋಜನೆಗೊಂಡ 43 ಸಾವಿರ ಅಧಿಕಾರಿ ಸಿಬ್ಬಂದಿಗೆ ಮತಗಟ್ಟೆ ಕೇಂದ್ರ ನಿಗದಿ ಪಡಿಸಲಾಯಿತು. ಈ ಅಧಿಕಾರಿ ಸಿಬ್ಬಂದಿಯು ಗುರುವಾರ ನಗರದ 28 ಮಸ್ಟರಿಂಗ್‌ ಕೇಂದ್ರದಲ್ಲಿ ಬೆಳಗ್ಗೆ 9.30 ರಿಂದ ಮತ ಯಂತ್ರ ಸೇರಿದಂತೆ ಮತದಾನಕ್ಕೆ ಅಗತ್ಯವಿರುವ ಸಾಮಗ್ರಿಗಳನ್ನು ಪಡೆಯಲು ವ್ಯವಸ್ಥೆ ಮಾಡಲಾಗಿದೆ.

ತುಮಕೂರು : ಜೆಡಿಎಸ್‌ ವಿಕೆಟ್ ಪತನ : ಕಾಂಗ್ರೆಸ್ ಸೇರ್ಪಡೆ

ಮತದಾನ ಸಾಮಗ್ರಿ ಪಡೆದು ಚುನಾವಣಾ ಆಯೋಗದ ವ್ಯವಸ್ಥೆ ಮಾಡಿರುವ ವಾಹನದಲ್ಲಿ ಮತಗಟ್ಟೆ ತೆರಳಿದ್ದು, ಶುಕ್ರವಾರ ಬೆಳಗ್ಗೆ 7 ಗಂಟೆಗೆ ಮತದಾನಕ್ಕೆ ತಯಾರಿ ಮಾಡಿಕೊಳ್ಳಲಿದ್ದಾರೆ.

click me!