ನಿನ್ನೆ ಬೆಳಗ್ಗೆಯೇ ತೀರ್ಮಾನವಾಗಿತ್ತಾ ಸಿಎಂ-ಡಿಸಿಎಂ? ಕಾಂಗ್ರೆಸ್‌ ಅಧಿಕಾರ ಹಂಚಿಕೆ ಸೂತ್ರದ ಸೀಕ್ರೆಟ್‌ ಇಲ್ಲಿದೆ..

May 18, 2023, 2:13 PM IST

ಕಾಂಗ್ರೆಸ್‌ ಸರ್ಕಾರ ರಚನೆ ವಿಚಾರವಾಗಿ ಕಾಂಗ್ರೆಸ್‌ ಹೈಕಮಾಂಡ್‌ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ನಡುವೆ ರಾಜಿ ಸಂಧಾನ ಸೂತ್ರ ಮಾಡಿದ್ದಾದ್ರೂ ಹೇಗೆ ಅಂತೀರಾ..? ಮೊದಲ 2 ವರ್ಷ ಸಿದ್ದರಾಮಯ್ಯಗೆ ಸಿಎಂ ಪಟ್ಟ, ಬಳಿಕ ಡಿ.ಕೆ. ಶಿವಕುಮಾರ್‌ಗೆ 3 ವರ್ಷ ಅಧಿಕಾರ ಎಂದು ಈ ಮೊದಲು ಹೇಳಲಾಗಿತ್ತು. ಆದರೀಗ 30 - 30 ಅಂದರೆ 30 ತಿಂಗಳು ಅಥವಾ ತಲಾ ಎರಡೂವರೆ ವರ್ಷ ಇಬ್ಬರಿಗೂ ಅಧಿಕಾರ ಎಂದು ಹೇಳಲಾಗಿದೆ. ಅಲ್ಲದೆ, ಡಿಕೆಶಿಗೆ ಡಿಸಿಎಂ ಜತೆಗೆ 2 ಸಚಿವ ಸಂಪುಟದಲ್ಲಿ 2 ಪ್ರಮುಖ ಖಾತೆ ನೀಡಲಾಗುತ್ತದೆ ಎಂದೂ ತಿಳಿದುಬಂದಿದೆ.