ಕರ್ನಾಟಕ ರಾಜಕೀಯದಲ್ಲಿ ಹೊಂದಾಣಿಕೆ ಬಾಂಬ್, ಕೇಸರಿ ಕಲಿಗಳ ಆರೋಪಕ್ಕೆ ಕಾಂಗ್ರೆಸ್ ಕೆಂಡಾಮಂಡಲ!

Jun 13, 2023, 11:51 PM IST

ಸಿದ್ದರಾಮಯ್ಯ, ಕಾಂಗ್ರೆಸ್ ಜೊತೆ ಬಿಜೆಪಿ ನಾಯಕರು ಮಾಡಿಕೊಂಡ ಹೊಂದಾಣಿಕೆಯೇ ಈ ಹೀನಾಯ ಸೋಲಿಗೆ ಕಾರಣ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಸಿಟಿವಿ ರವಿ, ಸುನಿಲ್ ಕುಮಾರ್ ಕೂಡ ಇದೇ ಆರೋಪ ಮಾಡಿದ್ದಾರೆ. ಇದೀಗ ರಾಜ್ಯ ಬಿಜೆಪಿ ಪ್ರಮುಖ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ.ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಹೊಂದಾಣಿಕೆ ರಾಜಕೀಯದಿಂದಲೇ ಸೋಲಾಗಿದೆ ಅನ್ನೋ ಆರೋಪ ಹೆಚ್ಚಾಗುತ್ತಿದೆ. ಖುದ್ದು ಬಿಜೆಪಿ ನಾಯಕರೇ ಈ ಆರೋಪ ಮಾಡುತ್ತಿದ್ದಾರೆ. ಮೊನ್ನೆ ಸಿಟಿ ರವಿ, ಇದೀಗ ಸಂಸದ ಪ್ರತಾಪ್ ಸಿಂಹ ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿ ಆರೋಪಕ್ಕೆ ಆರೋಪಕ್ಕೆ ಕಾಂಗ್ರೆಸ್ ನಾಯಕರು ಗರಂ ಆಗಿದ್ದಾರೆ. ಸುಮ್ಮನೆ ಆರೋಪ ಮಾಡುವುದಲ್ಲ, ಹೆಸರು ಘೋಷಣೆ ಮಾಡಲಿ ಎಂದು ಕಾಂಗ್ರೆಸ್ ತಿರುಗೇಟು ನೀಡಿದ್ದಾರೆ.