ಬಿಗ್​ ಬಾಸ್​ ಮನೆಯಲ್ಲಿ ಕಣ್ಣೀರಿನ ಕಥೆಗಳು, ಮೋಕ್ಷಿತಾ ಮದುವೆಯಾಗದ್ದು, ಮಂಜು ಹಾದಿ ತಪ್ಪಿದ್ದು!

By Gowthami K  |  First Published Oct 29, 2024, 11:58 PM IST

ಬಿಗ್​ ಬಾಸ್​ ಕನ್ನಡ 11ರ ಮನೆಯಲ್ಲಿ ಸ್ಪರ್ಧಿಗಳು ತಮ್ಮ ನೋವಿನ ಕಥೆಗಳನ್ನು ಹಂಚಿಕೊಂಡಿದ್ದಾರೆ. ಐಶ್ವರ್ಯಾ ಸಿಂಧೋಗಿ, ಚೈತ್ರಾ ಕುಂದಾಪುರ, ಉಗ್ರಂ ಮಂಜು, ಮೋಕ್ಷಿತಾ ಪೈ ಸೇರಿದಂತೆ ಹಲವರು ತಮ್ಮ ಕಷ್ಟದ ದಿನಗಳನ್ನು ನೆನೆದು ಕಣ್ಣೀರು ಹಾಕಿದ್ದಾರೆ.


ಬಿಗ್​ ಬಾಸ್​ ಕನ್ನಡ 11ರ  ಮನೆಯಲ್ಲಿ    ಸ್ಪರ್ಧಿಗಳು ಇಲ್ಲಿವರೆಗೆ ಯಾರ ಬಳಿಯ ಹಂಚಿಕೊಳ್ಳದ ವಿಚಾರವಿದ್ದರೆ ಹಂಚಿಕೊಂಡು ಮನಸ್ಸು ಹಗುರ ಮಾಡಿಕೊಳ್ಳಬಹುದು ಎಂದರು. ಇದಕ್ಕೆ ಹಲವು ಸ್ಪರ್ಧಿಗಳು ಅತ್ತು ತಮ್ಮ ಕಷ್ಟದ ದಿನಗಳನ್ನು ನೆನೆದಿದ್ದಾರೆ.

ಕನ್ಫೆಷನ್ ರೂಮ್​ನಲ್ಲಿ ಎಲ್ಲರೂ ತಮ್ಮ ಬದುಕಿನ ನೋವಿನ ಸಂದರ್ಭವನ್ನು ಮೆಲುಕು ಹಾಕಿದ್ದಾರೆ. ಐಶ್ವರ್ಯಾ ಸಿಂಧೋಗಿ, ಚೈತ್ರಾ ಕುಂದಾಪುರ,  ಉಗ್ರಂ ಮಂಜು,  ಮೋಕ್ಷಿತಾ ಪೈ ಸೇರಿ ಮನೆಯವರು ತಮ್ಮ ನೋವನ್ನು ಹಂಚಿಕೊಂಡು ಮನಸ್ಸು ಹಗುರ ಮಾಡಿಕೊಂಡರು.

Tap to resize

Latest Videos

undefined

ಅಭಿಷೇಕ್ ಪ್ರೇಮ ವೈಫಲ್ಯಗಳು: 2ಬ್ರೇಕಪ್‌ 1 ಮುರಿದ ನಿಶ್ಚಿತಾರ್ಥ, ಈಗ ವಿಚ್ಛೇದನ?

ಮನೆಯಲ್ಲಿ ಮದುವೆಗೆ ಒತ್ತಾಯ ಮಾಡಲಾಗುತ್ತಿದೆ. ಆದರೆ ಕಳೆದ ಒಂದು ವರ್ಷದಿಂದ ಮುಂದೂಡುತ್ತಾ ಬಂದಿದ್ದೇನೆ. ಅದಕ್ಕೆ ಕಾರಣ ನನಗಿರುವ ಜವಾಬ್ದಾರಿಗಳು. ನಾನು ಇಲ್ಲಿಗೆ ಬರಲು ಅಮ್ಮ ಕಾರಣ. ಒಂದು ವರ್ಷದಿಂದ ಮದುವೆಗೆ ಒತ್ತಾಯ ಮಾಡುತ್ತಿದ್ದಾರೆ. ನನ್ನ ತಮ್ಮ ಫಿಸಿಕಲಿ ಚಾಲೆಂಜಿಂಗ್ ಆಗಿರುವವನಾಗಿರುವುದಿಂದ ಮನೆಗೆ ಮಗ ಮತ್ತು ಮಗಳು ಎರಡೂ ನಾನೇ ಆಗಿದ್ದೇನೆ.  ಒಂದು ವೇಳೆ ಮದುವೆ ಆದರೆ ಮನೆಯವರನ್ನು ಯಾರು ನೋಡಿಕೊಳ್ಳುತ್ತಾರೆ ಎಂಬ ಚಿಂತೆ ಇದೆ. 

ಇದರ ಜೊತೆಗೆ ಮದುವೆಯಾದ ಹುಡುಗ ಎಲ್ಲಿಂದ ಅಪ್ಪ-ಅಮ್ಮನಿಂದ ದೂರ ಮಾಡುತ್ತಾನೆ ಎನ್ನುವ  ಭಯ ಇದೆ. ಮದುವೆ ಆದರೆ ಎಲ್ಲಿ ನಿಮ್ಮಿಂದ ದೂರ ಆಗ್ತೀನೋ ಎನ್ನುವ ಭಯ ಇದೆ. ಇದರಿಂದ ಮದುವೆ ಮುಂದಕ್ಕೆ ಹಾಕಿ ನಿಮಗೆ ನೋವು ಕೊಟ್ಟಿದ್ದೇನೆ. ನಾನು ನಿನಗೆ ಯಾವತ್ತೂ  ಮಿಸ್‌ ಯೂ ಅಂತ ಹೇಳಿಲ್ಲ ಅಮ್ಮ ಆದರೆ ಈಗ ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಾನು ಬಿಗ್ ಬಾಸ್​ಗೆ ಬರಬೇಕು ಎಂಬುದು ನಿಮ್ಮ ಕನಸು. ಹಾಗಾಗಿ ನಿಮಗೆ ನಿರಾಸೆ ಮಾಡಲ್ಲ’ ಎಂದಿದ್ದಾರೆ.

ಬಿಗ್ ಬಾಸ್ ತೆಲುಗು 8ರ ಫೈನಲ್ಸ್‌ಗೆ ಹೋಗೋ ಸ್ಪರ್ಧಿಗಳು ಯಾರು, ಕನ್ನಡಿಗರಿಗೆ ಸಿಗುತ್ತಾ ಕಿರೀಟ?

ಕಣ್ಣೀರಾದ ಉಗ್ರಂ ಮಂಜು: ಇನ್ನು ಬಿಗ್‌ಬಾಸ್‌ ಬಳಿ ತನ್ನ ನೋವು ತೋಡಿಕೊಂಡ ಉಗ್ರಂ ಮಂಜು ಮನೆಯಲ್ಲಿ ಕಣ್ಣೀರಾದರು.ನಾನು ಕೆಲವು ದುಷ್ಚಟಗಳಿಗೆ ಒಳಗಾದೆ. ನನ್ನ ಅಪ್ಪ, ಅಮ್ಮ ಮತ್ತು ತಂಗಿಯರಿಗಾಗಿ ಬದಲಾಗುತ್ತೇನೆ. ಅವರಿಗಾಗಿ ಬದುಕುತ್ತೇನೆ. ತಪ್ಪು ಮಾಡಿದೆ ಮತ್ತೆ ಮಾಡಲ್ಲ ಎಂದು ಬಿಗ್‌ಬಾಸ್‌ ಗೆ ತಿಳಿಸಿದರು.

ಬಳಿಕ ಹೊರಗಡೆ ಬಂದ ಮಂಜು, ಗೌತಮಿ ಜಾದವ್  ಮುಂದೆ ಮತ್ತೆ ಬೇಸರ ತೋಡಿಕೊಂಡು ಯಾರ ಪುಣ್ಯವೋ ಏನೋ? ನಾನು ದೊಡ್ಮನೆಗೆ ಬಂದಿದ್ದೇನೆ ಅಂತಲೇ ಎಮೋಷನಲ್ ಆಗಿ ಅತ್ತರು. ಸೋತು ಕುಂತಾಗ ಏನಾಗುತ್ತದೆ ಅನ್ನೋ ಅನುಭವ ನನಗೆ ತಿಳಿದಿದೆ ಅಂತ ಗೌತಮಿ ಸಮಾಧಾನ ಮಾಡಿದರು.

ಚೈತ್ರಾ ಕುಂದಾಪುರ ಕಷ್ಟಕಾಲ: ಮಂಗಳೂರಿನಲ್ಲಿ ಪತ್ರಿಕೋದ್ಯಮ ಮಾಡುತ್ತಿರುವಾಗ ಮೆರಿಟ್‌ ನಲ್ಲಿ ಸೀಟ್‌ ಸಿಕ್ಕಿತ್ತು. ಹಾಗಾಗಿ ಕಾಲೇಜು ಫೀಜ್ ಇರಲಿಲ್ಲ ಆದರೆ ಉಳಿದುಕೊಳ್ಳಲು ಹಾಸ್ಟೆಲ್‌ ಇರಲಿಲ್ಲ, ಅದಕ್ಕಾಗಿ ದುಡಿಮೆ ಅನಿವಾರ್ಯವಾಗಿತ್ತು.  ಒಂದು ವರ್ಷ ನಾನು ಯಾರದ್ದೋ ಮನೆಯಲ್ಲಿ ಮುಸುರೆ ತಿಕ್ಕುತ್ತಿದ್ದೆ’ ಆರ್ಕೆಸ್ಟ್ರಾ ಟೀಂ ನಲ್ಲಿ ನಿರೂಪಣೆ ಮಾಡಿದ್ದೆ ಎಂದು ಹೇಳುತ್ತಾ ಚೈತ್ರಾ ಕುಂದಾಪುರ ಅವರು ಗಳಗಳನೆ ಅತ್ತಿದ್ದಾರೆ.

ಇನ್ನು ನಿನ್ನೆಯ ಎಪಿಸೋಡ್‌ ನಲ್ಲಿ ‘ನಮ್ಮ ತಾಯಿ ಹಾಸಿಗೆ ಹಿಡಿದಿದ್ದರು. ಆಗ ಸಂಬಂಧಿಕರು ನಮ್ಮ ಅಮ್ಮನ ತಲೆ ತುಂಬುತ್ತಿದ್ದರು. ನಾನು ಅಮ್ಮನ ಮೇಲೆ ತುಂಬ ಕಿರುಚಾಡಿದೆ. ಮಾತನಾಡಿಸಿ ಕೆಲವು ದಿನ ಆದ ಮೇಲೆ ಅವರು ನನ್ನ ಜೊತೆ ಇರಲ್ಲ. ಇದು ನನಗೆ ತುಂಬಾ ಕಾಡುತ್ತೆ ಎಂದಿದ್ದಾರೆ.
 

click me!