Assembly election: ಸಿಂ'ಹಾಸನ' ಫೈಟ್‌ ಬೆನ್ನಲ್ಲೇ ಎಚ್‌ಡಿ ರೇವಣ್ಣಗೆ ಮತ್ತೊಂದು ಬಿಗ್‌ ಶಾಕ್!

Feb 8, 2023, 12:33 PM IST

ಹಾಸನ(ಫೆ.08):  ಹಾಸನದಲ್ಲಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರಿಗೆ ಜೆಡಿಎಸ್‌ ಕಾರ್ಯಕರ್ತರು ಬಿಗ್‌ ಶಾಕ್‌ ನೀಡಿದ್ದಾರೆ. ರೇವಣ್ಣ ಕುಟುಂಬ ವಲಯದಲ್ಲಿ ಗುರುತಿಸಿಕೊಂಡಿದ್ದ ಹಲವು ನಾಯಕರು ಕಾಂಗ್ರೆಸ್‌ ಸೇರ್ಪಡೆ ಆಗಲು ಮುಂದಾಗಿದ್ದಾರೆ.

ಸುಮಾರು ಒಂದು ಸಾವಿರ ಜೆಡಿಎಸ್‌ ಕಾರ್ಯಕರ್ತರು ಸಂಸದ ಡಿ.ಕೆ. ಸುರೇಶ್‌ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆ ಆಗುತ್ತಿದ್ದಾರೆ ಎಂದು ತಿಳಿದುಬಂದಿದೆ. ರೇವಣ್ಣ ಕುಟುಂಬದೊಂದಿಗೆ ಗುರುತಿಸಿಕೊಂಡಿದ್ದ ಆಪ್ತರು ಆಗಿದ್ದರು. ರಾಜ್ಯದ ವಿಧಾನಸಭಾ ಚುನಾವಣೆ ಸಮಯದಲ್ಲಿಯೇ ಜೆಡಿಎಸ್‌ ಪ್ರಮುಖರು ಮತ್ತು ಕಾರ್ಯಕರ್ತರು ದೊಡ್ಡ ಮೊಟ್ಟದಲ್ಲಿ ಕಾಂಗ್ರೆಸ್‌ ಸೇರ್ಪಡೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಹೀಗಾಗಿ, ಎಚ್.ಡಿ. ರೇವಣ್ಣ ಅವರ ಸ್ವಕ್ಷೇತ್ರ ಹೊಳೆ ನರಸೀಪುರದಲ್ಲಿ ಜೆಡಿಎಸ್‌ಗೆ ಭಾರಿ ಹಿನ್ನಡೆ ಉಂಟಾಗುತ್ತಿದೆ. ಇದರೊಂದಿಗೆ ರೇವಣ್ಣ ಅವರಿಗೆ ಭಾರಿ ಪ್ರಮಾಣದ ಹಿನ್ನಡೆ ಉಂಟಾಗಲಿದೆಯೇ ಎಂಬ ಅನುಮಾನ ಎದುರಾಗಿದೆ.