ನಿಮಗೆ ಸ್ಪ್ಯಾಮ್ ಕಾಲ್,SMS ಬರುತ್ತಿದೆಯಾ? ಜಿಯೋದಲ್ಲಿ ಬ್ಲಾಕ್ ಮಾಡುವುದು ಹೇಗೆ?

First Published | Nov 26, 2024, 8:14 PM IST

ಪ್ರತಿ ದಿನ ನಿಮಗೆ ಸ್ಪ್ಯಾಮ್ ಕರೆ, ಎಸ್ಎಂಎಸ್ ಹೆಚ್ಚಾಗುತ್ತಿದೆ. ಬ್ಲಾಕ್ ಮಾಡಿದರೂ ಹೊಸ ಹೊಸ ನಂಬರ್ ಮೂಲಕ ಕರೆ, ಸಂದೇಶ ಬರುತ್ತಿದೆಯಾ? ರಿಲಯನ್ಸ್ ಜಿಯೋ ಈ ಸಮಸ್ಯೆಗೆ ಸರಳ ಪರಿಹಾರ ಸೂಚಿಸಿದೆ.  

ಸ್ಪ್ಯಾಮ್ ನಿರ್ಬಂಧಿಸಿ

ಪ್ರಮೋಶನಲ್, ಜಾಹೀರಾತು, ಸಾಲ, ಕ್ರೆಡಿಟ್ ಕಾರ್ಡ್, ಹೀಗೆ ಪ್ರತಿ ದಿನ ನಿಮಗೆ ಸ್ಪ್ಯಾಮ್ ಕಾಲ್ ಹೆಚ್ಚಾಗುತ್ತಿದೆಯಾ? ಸೈಬರ್ ಕ್ರಿಮಿನಲ್ಸ್ AI ಮತ್ತು ಮೆಷಿನ್ ಲರ್ನಿಂಗ್ ಬಳಸಿ ಸ್ಪ್ಯಾಮ್ ಕರೆ ಮಾಡ್ತಾರೆ. ಇದೀಗ ರಿಲಯನ್ಸ್ ಈ ಸಮಸ್ಯೆಗೆ ಸರಳ ಪರಿಹಾರ ಸೂಚಿಸಿದೆ.  

ಸ್ಪ್ಯಾಮ್ ಕರೆಗಳು

ನೀವು ಜಿಯೋ ಯೂಸರ್ ಆಗಿದ್ರೆ, MyJio ಆಪ್ ಮೂಲಕ ಒಂದೇ ಕ್ಲಿಕ್‌ನಲ್ಲಿ ಬೇಡದ ಕರೆ, SMS ಬ್ಲಾಕ್ ಮಾಡಬಹುದು. ಈ ಮೂಲಕ ಪ್ರತಿ ದಿನ ಅನುಭವಿಸುವ ಕಿರಿಕಿರಿ, ಸಮಸ್ಯೆಗಳನ್ನು ತಪ್ಪಿಸಲು ಸಾಧ್ಯವಿದೆ. ಇಷ್ಟೇ ಅಲ್ಲ ಸ್ಪ್ಯಾಮ್ ಕರೆ ಹಾಗೂ SMS ಬ್ಲಾಕ್ ಮಾಡಿ ನಿಶ್ಚಿಂತೆಯಿಂದ ಇರಬಹುದು.

Tap to resize

ಸ್ಪ್ಯಾಮ್ ಮೆಸೇಜ್ ಬ್ಲಾಕ್ ಮಾಡಿ

ಜಿಯೋ ಆ್ಯಪ್ ಮೂಲಕ ಸ್ಪ್ಯಾಮ್ ಕರೆ ಹಾಗೂ ಸಂದೇಶ ಬ್ಲಾಕ್ ಮಾಡಿದರೆ,  OTPಗಳು ಮತ್ತು ಟ್ರಸ್ಟೆಡ್ ಬ್ರ್ಯಾಂಡ್‌ಗಳಿಂದ ಇಂಪಾರ್ಟೆಂಟ್ ಮೆಸೇಜ್‌ಗಳು ಬರುತ್ತದೆ. ಇದಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ. ಸ್ಪ್ಯಾಮ್ ಕರೆಗಳನ್ನ ಪೂರ್ತಿ ಬ್ಲಾಕ್ ಮಾಡಬಹುದು, ಕೆಲವು ಪ್ರಮೋಷನಲ್ ಕರೆಗಳಿಗೆ ಅವಕಾಶ ಕೊಡುವ ಆಯ್ಕೆಯೂ ಲಭ್ಯವಿದೆ. 

ಡಿಸ್ಟರ್ಬ್ ಮಾಡಬೇಡಿ

ಜಿಯೋದಲ್ಲಿ ಸ್ಪ್ಯಾಮ್ ಬ್ಲಾಕ್ ಮಾಡೋಕೆ, Do Not Disturb (DND) ಸರ್ವಿಸ್ ಆಕ್ಟಿವೇಟ್ ಮಾಡಿ. ಇದು ಸ್ಪ್ಯಾಮ್ ಕರೆ, SMS ಜೊತೆಗೆ ಕೆಲವು ಟೆಲಿಮಾರ್ಕೆಟಿಂಗ್ ಕರೆಗಳನ್ನು ಬ್ಲಾಕ್ ಮಾಡುತ್ತೆ.

MyJio DND ಸೇವೆ

ಬ್ಯಾಂಕಿಂಗ್, ರಿಯಲ್ ಎಸ್ಟೇಟ್, ಎಜುಕೇಶನ್, ಹೆಲ್ತ್‌ಕೇರ್, ಟ್ರಾವೆಲ್ ಸೇರಿದಂತೆ ಬೇರೆ ಬೇರೆ ಕೆಟಗರಿಯ ಕರೆ, ಮೆಸೇಜ್‌ಗಳನ್ನು ಬ್ಲಾಕ್ ಮಾಡಲು ಯೂಸರ್ಸ್ DND ಕಸ್ಟಮೈಸ್ ಮಾಡಬಹುದು.

ಸ್ಪ್ಯಾಮ್ ಎಚ್ಚರಿಕೆ

ಪೂರ್ತಿ ಸ್ಪ್ಯಾಮ್ ಬ್ಲಾಕಿಂಗ್ ಇದ್ದರೂ, ನೆಟ್‌ವರ್ಕ್ ಪ್ರೊವೈಡರ್ ಮತ್ತು ಸರ್ಕಾರಿ ಏಜೆನ್ಸಿಗಳಿಂದ ಕರೆ, SMS ಬರುತ್ತೆ. ಯೂಸರ್ಸ್ ಮ್ಯಾಕ್ಸಿಮಮ್ ಪ್ರೊಟೆಕ್ಷನ್‌ಗೆ ಪೂರ್ತಿ ಸ್ಪ್ಯಾಮ್ ಬ್ಲಾಕಿಂಗ್ ಆಯ್ಕೆ ಮಾಡಬಹುದು.

Latest Videos

click me!