ರಾಜ್ಯ Vs ಕೇಂದ್ರ ಸರ್ಕಾರಗಳ ಮಧ್ಯೆ ಅಕ್ಕಿಯುದ್ಧ: ಈ ದಂಗಲ್‌ನಲ್ಲಿ ಸೋತು "ಹಣಭಾಗ್ಯ" ನೀಡಿದ ಸಿದ್ದು ಸರ್ಕಾರ..!

Jul 12, 2023, 1:19 PM IST

ಅನ್ನ ದುಡ್ಡು ಅಸ್ತ್ರ.. ಇದು ಸಮರರಾಮಮಯ್ಯನ ಬತ್ತಳಿಕೆಯಿಂದ ಸಿಡಿದಿರೋ ಅಸ್ತ್ರ. ಪಂಚಗ್ಯಾರಂಟಿಗಳ ವಾಗ್ದಾನದಲ್ಲಿ ಜಾರಿಗೆ ಬಂತು 3ನೇ ಗ್ಯಾರಂಟಿ( Guarantee). ಅಕ್ಕಿ+ಹಣಭಾಗ್ಯಕ್ಕೆ ಚಾಲನೆ ಕೊಟ್ಟು ಮೋದಿ ಸರ್ಕಾರಕ್ಕೆ ಗುದ್ದು ಕೊಟ್ರು ಸಿಎಂ ಸಿದ್ದರಾಮಯ್ಯ. ಗ್ಯಾರಂಟಿ ಅಸ್ತ್ರದಿಂದಲೇ ಮತ್ತೊಂದು ಮಹಾಯುದ್ಧ ಗೆಲ್ಲಲು ಸಿದ್ದು ಮಾಸ್ಟರ್'ಪ್ಲಾನ್ ಮಾಡಿದ್ದಾರೆ. ಇದು ಸಿದ್ದರಾಮಯ್ಯ(Siddaramaiah) ಸಂಕಲ್ಪ, ಅನ್ನರಾಮಯ್ಯನ ಅನ್ನಸಂಕಲ್ಪ. ಬಡವರ ಪಾಲಿನ ಭಾಗ್ಯವಿದಾತ ಸಿದ್ದರಾಮಯ್ಯನವರ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆ ಅನ್ನಭಾಗ್ಯ(Annabhagya). 2013ರಲ್ಲಿ ಮೊದಲ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಸಿದ್ದರಾಮಯ್ಯನವರು ಮಾಡಿದ್ದ ಮೊದಲ ಕೆಲಸ ಅನ್ನಭಾಗ್ಯ ಯೋಜನೆಯ ಜಾರಿ. ಈಗ ಸಿದ್ದರಾಮಯ್ಯ 2ನೇ ಬಾರಿ ವಿಧಾನಸೌಧದ(Vidhana Soudha) ಮೂರನೇ ಮಹಡಿಯಲ್ಲಿರೋ ಸಿಎಂ ಕಚೇರಿಯಲ್ಲಿ ಕೂತು ರಾಜ್ಯಭಾರ ಶುರು ಮಾಡಿದ್ದಾರೆ. ಇಂಟ್ರೆಸ್ಟಿಂಗ್ ಸಂಗತಿ ಏನಂದ್ರೆ, ಅನ್ನಭಾಗ್ಯ ಯೋಜನೆಗೆ 10 ವರ್ಷ ತುಂಬಿದ ದಿನವೇ ತಮ್ಮ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ಜಾರಿಗೊಳಿಸಿದ್ದಾರೆ.

ಇದನ್ನೂ ವೀಕ್ಷಿಸಿ:  ಉತ್ತರ ಭಾರತದಲ್ಲಷ್ಟೇ ಏಕೆ ಈ ಪರಿ ಮಳೆ..?: ಎರಡು ಮಾರುತಗಳ ಸಮ್ಮಿಲನವಾಗಿದ್ದು ಹೇಗೆ..?