5 States Elections: ಮೋದಿ- ಯೋಗಿಗೆ ಉತ್ತರ ಪ್ರದೇಶ ಗೆಲುವು ಅದೆಷ್ಟು ಮುಖ್ಯ.?

Jan 21, 2022, 5:13 PM IST

ನವದೆಹಲಿ (ಜ. 21): ಕೋವಿಡ್‌ 3ನೇ ಅಲೆಯ (Covid 19) ಭೀತಿ ನಡುವೆಯೇ ಬಹುನಿರೀಕ್ಷಿತ ಉತ್ತರ ಪ್ರದೇಶ (Uttar Pradesh) ಪಂಜಾಬ್‌, ಉತ್ತರಾಖಂಡ, ಗೋವಾ ಮತ್ತು ಮಣಿಪುರ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದೆ.  ಫೆ.10 ರಿಂದ ಮಾ.7ರ ಅವಧಿಯಲ್ಲಿ ಹಲವು ಹಂತಗಳಲ್ಲಿ ಕೋವಿಡ್‌ ಮಾರ್ಗಸೂಚಿ ಪಾಲಿಸಿ ಚುನಾವಣೆ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಮಾ.10 ರಂದು ಈ ಎಲ್ಲಾ 5 ರಾಜ್ಯಗಳ ಫಲಿತಾಂಶ ಪ್ರಕಟವಾಗಲಿದೆ.

Weekend Curfew: ದೆಹಲಿಯಲ್ಲಿ ವೀಕೆಂಡ್ ಲಾಕ್‌ಡೌನ್ ವಾಪಸ್, ಜನತೆಗೆ ನಿರಾಳ

ಚುನಾವಣೆಗೆ ಸಜ್ಜಾಗಿರುವ 5 ರಾಜ್ಯಗಳ ಪೈಕಿ ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಮಣಿಪುರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಪಂಜಾಬ್‌ನಲ್ಲಿ ಮಾತ್ರ ಕಾಂಗ್ರೆಸ್‌ ಅಧಿಕಾರದಲ್ಲಿದೆ. ಹೀಗಾಗಿ ತನ್ನ ಕೈಲಿರುವ ನಾಲ್ಕು ರಾಜ್ಯಗಳನ್ನು ಉಳಿಸಿಕೊಳ್ಳುವ ಅಗ್ನಿಪರೀಕ್ಷೆಯನ್ನು ಬಿಜೆಪಿ ಎದುರಿಸುತ್ತಿದೆ. ಪಂಜಾಬ್‌ ಮತ್ತು ಗೋವಾದಲ್ಲಿ ಈ ಬಾರಿ ಆಪ್‌ ಕೂಡ ಪ್ರಬಲ ಪ್ರತಿಸ್ಪರ್ಧಿಯಾಗಿದೆ.

ಈಗ ಲೋಕಸಭೆ ಚುನಾವಣೆ(Lok Sabha Elections) ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎ(BJP-led NDA) 296 ಸ್ಥಾನ ಗಳಿಸಿ ಬಹುಮತ ಗಳಿಸಲಿದೆ. ಇನ್ನು ಬಹುಮತದ ಅಂಕಿಯಾದ 272ರ ಸನಿಹವಾದ 271 ಸ್ಥಾನ ಗಳಿಸಲಿರುವ ಬಿಜೆಪಿ ಬಹುತೇಕ ಏಕಾಂಗಿಯಾಗಿ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಯೊಂದು(Survey) ಹೇಳಿದೆ.

\