ಈ ವಾರದ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..
ಈ ವಾರದ ವಿಶೇಷಗಳೇನು ಎಂದು ನೋಡುವುದಾದ್ರೆ, ಸೆ.6 ರಂದು ಕೃಷ್ಣಜನ್ಮಾಷ್ಟಮಿ ಇದೆ. ಸೆ.9 ಕೊನೆ ಶ್ರಾವಣ ಶನಿವಾರವಾಗಿದೆ. ಸೆ.7 ರಂದು ಕೃಷ್ಣ ಜಯಂತಿ ಇದೆ. ಈ ವಾರದಲ್ಲಿ ಮೇಷ ರಾಶಿಯವರಿಗೆ ಸೋಲುಂಟುಗಾಗಿ ಮನಸ್ಸಿಗೆ ನೋವಾಗುವ ಸಾಧ್ಯತೆ ಇದೆ. ತಂದೆ- ಮಕ್ಕಳಲ್ಲಿ ಭಿನ್ನಾಭಿಪ್ರಾಯ ಬರಲಿದೆ. ಹಾಗಾಗಿ ಸುಬ್ರಹ್ಮಣ್ಯ ಕವಚ ಪಠಿಸಿ. ವೃಷಭ ರಾಶಿಯವರಿಗೆ ವ್ಯಾಪಾರದಲ್ಲಿ ನಷ್ಟವಾಗುವ ಸಾಧ್ಯತೆ ಇದೆ. ಆದ್ರೆ ವೃತ್ತಿಯಲ್ಲಿ ಆತಂಕವಿಲ್ಲ. ನೀವು ದುರ್ಗಾಪರಮೇಶ್ವರಿ ಪ್ರಾರ್ಥನೆ ಮಾಡಿ. ಕರ್ಕಟಕ ರಾಶಿಯವರಿಗೆ ಸೇವಕರಿಂದ ತೊಂದರೆಯಾಗುವ ಸಾಧ್ಯತೆ ಇದ್ದು, ಕಿವಿ ಸಮಸ್ಯೆ ಉಂಟಾಗಬಹುದು. ವೃತ್ತಿಯಲ್ಲಿ ಅನುಕೂಲವಿದ್ದು, ವ್ಯಾಪಾರಿಗಳಿಗೆ ಲಾಭವಾಗಲಿದೆ. ಈ ರಾಶಿಯವರು ದುರ್ಗಾ ಸನ್ನಿಧಾನಕ್ಕೆ ಬಿಳಿ ಪುಷ್ಪ ಸಮರ್ಪಣೆ ಮಾಡಿ. ಉಳಿದ ರಾಶಿಗಳ ಭವಿಷ್ಯ ಹೀಗಿದೆ..
ಇದನ್ನೂ ವೀಕ್ಷಿಸಿ: ಹುಟ್ಟುಹಬ್ಬದ 'ಸುವರ್ಣ' ಮಹೋತ್ಸವದಲ್ಲಿ ಕಿಚ್ಚ: ಅಭಿಮಾನದ 'ಕಿಚ್ಚೋತ್ಸವ'ದಲ್ಲಿ ಮಿಂದೆದ್ದ ಸುದೀಪ್ ಏನಂದ್ರು.?