ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ನಿಜ ಶ್ರಾವಣ ಮಾಸ, ಕೃಷ್ಣ ಪಕ್ಷ, ಮಂಗಳವಾರ, ಷಷ್ಠಿ ತಿಥಿ, ಭರಣಿ ನಕ್ಷತ್ರ.
ಮಂಗಳವಾರ ಷಷ್ಠಿ ಬಂದಿರುವುದರಿಂದ ಸುಬ್ರಹ್ಮಣ್ಯ ಸ್ವಾಮಿಗೆ ಇಂದು ರುದ್ರಾಭಿಷೇಕ ಮಾಡಿಸಿ. ಈ ದಿನ ಸುಬ್ರಹ್ಮಣ್ಯನ ಆರಾಧನೆಗೆ ಪ್ರಸಕ್ತ ಕಾಲವಾಗಿದೆ. ವಿದ್ಯಾಸಕ್ತಿ ಯಾರಿಗೆ ಬೇಕೋ ಅವರು ಸುಬ್ರಹ್ಮಣ್ಯ ಸ್ವಾಮಿ ಪ್ರಾರ್ಥನೆ ಮಾಡಿ. ಈ ದಿನ ಮಿಥುನ ರಾಶಿಯವರಿಗೆ ಮಿತ್ರರ ಸಹಾಯ ಇರಲಿದೆ. ಪ್ರೀತಿ ವಿಚಾರದಲ್ಲಿ ಮನಸ್ತಾಪ ಬರಲಿದ್ದು, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯವಿರಲಿದೆ. ಹೀಗಾಗಿ ಉಮಾಮಹೇಶ್ವರನ ಪ್ರಾರ್ಥನೆ ಮತ್ತು ಮಂಗಳಗೌರಿ ವ್ರತ ಮಾಡಿ.
ಇದನ್ನೂ ವೀಕ್ಷಿಸಿ: ಇಂಡಿಯಾ ಒಕ್ಕೂಟದ ಮೈತ್ರಿ ಪಕ್ಷಗಳಿಂದ ಸನಾತನ ಧರ್ಮ ವಿರೋಧಿ ನೀತಿ, ಸಿಡಿದೆದ್ದ ಭಾರತ!