ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ನಿಜ ಶ್ರಾವಣ ಮಾಸ, ಕೃಷ್ಣ ಪಕ್ಷ, ಶುಕ್ರವಾರ, ದ್ವಿತೀಯಾ ತಿಥಿ, ಪೂರ್ವಾಭಾದ್ರಪದ ನಕ್ಷತ್ರ.
ಈ ದಿನ ಮಂತ್ರಾಲಯದ ಶ್ರೀಗುರು ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವ ನಡೆಸಲಾಗುತ್ತದೆ. ರಾಯರಲ್ಲಿ ದೇವತಾ ಶಕ್ತಿ ನೆಲೆಸಿದ್ದು, ಅವರು ರಾಮನ ಪರಮ ಭಕ್ತರಾಗಿದ್ದಾರೆ. ರಾಯರು ದೇವರಿಗೆ ಪರಮ ಪ್ರಿಯವಾಗಿದ್ದರು. ಅವರು ಕಾಮಧೇನು ಇದ್ದ ಹಾಗೆ, ಕೇಳಿದ್ದನ್ನು ಕೊಟ್ಟು ಬಿಡುತ್ತಾರೆ. ಕಷ್ಟದಲ್ಲಿ ಇರುವವರಿಗೆ ಕೇಳಿದ್ದನ್ನು ಕೊಡುವವರು ರಾಯರು, ಹಾಗಾಗಿ ಅವರನ್ನು ಇಂದು ಭಕ್ತಿಯಿಂದ ನೆನೆಯಿರಿ.
ಇದನ್ನೂ ವೀಕ್ಷಿಸಿ: ನನ್ನನ್ನು ಬಿಟ್ಟು ಕೆಲಸಕ್ಕೆ ಬಾರದವರನ್ನ ಚಾಮುಂಡೇಶ್ವರಿಯಲ್ಲಿ ಗೆಲ್ಲಿಸಿದವರು ನೀವು: ಸಿಎಂ ಸಿದ್ಧರಾಮಯ್ಯ