ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ನಿಜ ಶ್ರಾವಣ ಮಾಸ, ಕೃಷ್ಣ ಪಕ್ಷ, ಗುರುವಾರ, ಅಮಾವಾಸ್ಯೆ ತಿಥಿ, ಪುಬ್ಬ ನಕ್ಷತ್ರ.
ನಿಜ ಶ್ರಾವಣದ ಕೊನೆ ದಿನದಲ್ಲಿ ಇದ್ದೇವೆ. ಇಂದು ಅಮಾವಾಸ್ಯೆ ಇದ್ದು, ಪಿತೃದೇವತೆಗಳನ್ನು ಸ್ಮರಿಸಿ. ಇದರಿಂದ ನಿಮ್ಮ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಈ ದಿನ ವೃಷಭ ರಾಶಿಯವರಿಗೆ ವೃತ್ತಿಯಲ್ಲಿ ತುಂಬಾ ಅನುಕೂಲವಿದೆ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಬಂಧುಗಳಿಂದ ಕಿರಿಕಿರಿ, ಶತ್ರುಗಳ ಬಾಧೆ ಇರಲಿದೆ. ಇಂದು ಈ ರಾಶಿಯವರು ಪಿತೃದೇವತೆಗಳ ಸ್ಮರಣೆ ಮಾಡಿ.
ಇದನ್ನೂ ವೀಕ್ಷಿಸಿ: ಈ ದೇಶಕ್ಕೆ ಒಂದು ಯಂಗ್ ಲೀಡರ್‌ಶಿಪ್ ಬೇಕು, ರಾಹುಲ್ ಗಾಂಧಿ ಪ್ರಧಾನಿ ಆಗಲಿ: ಪ್ರದೀಪ್ ಈಶ್ವರ್