ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಆಶ್ವೀಜ ಮಾಸ, ಶುಕ್ಲ ಪಕ್ಷ, ಗುರುವಾರ, ಪಂಚಮಿ ತಿಥಿ, ಜ್ಯೇಷ್ಠ ನಕ್ಷತ್ರ.
ಪಂಚಮಿ ತಿಥಿ ತಾಯಿಗೆ ತುಂಬಾ ಶ್ರೇಷ್ಠವಾದದ್ದು ಆಗಿದೆ. ಈ ದಿನ ಆಕೆ ವಿರಾಜಮಾನಳಾಗಿ ಇರುತ್ತಾಳೆ. ಈ ದಿನ ಯಾರು ಲಲಿತಾ ಸಹಸ್ರನಾಮವನ್ನು ಹೇಳುತ್ತಾರೋ ಅಥವಾ ಕೇಳುತ್ತಾರೋ ಅವರಿಗೆ ಎಲ್ಲಾ ವರಗಳನ್ನು ಕರುಣಿಸುತ್ತಾಳೆ. ಎಲ್ಲರನ್ನೂ ತಾಯಿ ಹಾಗೆ ಸಲಹುವಳು ಸ್ಕಂದ ಮಾತೆಯಾಗಿದ್ದಾಳೆ. ನಮ್ಮ ನೋವನ್ನು ಮನಸ್ಸಿನಲ್ಲಿ ಮಿಡಿದರೇ, ಅದು ತಾಯಿಗೆ ತಲುಪುತ್ತದೆ. ಬಳಿಕ ಆಕೆ ನಮ್ಮ ನೋವನ್ನು ದೂರ ಮಾಡುತ್ತಾಳೆ.
ಇದನ್ನೂ ವೀಕ್ಷಿಸಿ: News Hour: ಕಾಂಗ್ರೆಸ್‌ನಲ್ಲಿ ಶುರುವಾಯ್ತು ಮತ್ತೆ ಬೆಳಗಾವಿ ಬೆಂಕಿ, ಜಾರಕಿಹೊಳಿ ಪವರ್‌ಗೆ ಡಿಕೆ ಡಿಚ್ಚಿ!