ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಆಶ್ವೀಜ ಮಾಸ, ಶುಕ್ಲ ಪಕ್ಷ, ಸೋಮವಾರ, ದ್ವಿತೀಯ ತಿಥಿ, ಸ್ವಾತಿ ನಕ್ಷತ್ರ.
ಇಂದು ನವರಾತ್ರಿಯ 2ನೇ ದಿನವಾಗಿದೆ. ಮಿಥುನ ರಾಶಿಯವರ ಶ್ರದ್ಧೆ ಹಾಳಾಗಲಿದೆ. ಧರ್ಮ ಕಾರ್ಯಗಳಲ್ಲಿ ಹಿನ್ನಡೆಯಾಗಲಿದ್ದು, ಅಮ್ಮನವರ ಪೂಜೆ ಮಾಡಿ. ವೃತ್ತಿಯಲ್ಲಿ ಅನುಕೂಲವಿದ್ದು, ಲಲಿತಾ ಪ್ರಾರ್ಥನೆ ಮಾಡಿ. ಇನ್ನೂ ಕರ್ಕಟಕ ರಾಶಿಯವರಿಗೆ ವಸ್ತು ನಷ್ಟವಾಗಲಿದೆ. ಸ್ನೇಹಿತರ ಸಹಕಾರವಿರಲಿದ್ದು, ಕೆಲಸದಲ್ಲಿ ಬಲವಿದೆ. ಮನಸ್ಸಿಗೆ ಸೋಲಾಗಲಿದ್ದು, ಲಲಿತಾರಾಧನೆ ಮಾಡಿ.
ಇದನ್ನೂ ವೀಕ್ಷಿಸಿ: ಇಸ್ರೇಲ್ ಯುದ್ಧಭೂಮಿಯಿಂದ ವರದಿಗಾರಿಕೆ ನಡುವೆ ತೂರಿ ಬಂತು ಹಮಾಸ್ ಉಗ್ರರ ರಾಕೆಟ್!