ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಗುರುವಾರ, ಏಕಾದಶಿ ತಿಥಿ, ಉತ್ತರ ನಕ್ಷತ್ರ.
ಮನಸ್ಸಿನ ಸಾಧನೆ ಜೊತೆಗೆ ಇಂದ್ರೀಯ ನಿಗ್ರಹಕ್ಕೆ ಏಕಾದಶಿ ಒಂದು ಸಾಧನವಾಗಿದೆ. ಈ ಸಂದರ್ಭದಲ್ಲಿ ವಿಷ್ಣು ಸನ್ನಿಧಾನ ಅಥವಾ ನಿಮ್ಮ ಇಷ್ಟದ ದೇವತಾ ಆರಾಧನೆ ಮಾಡಿ. ಸಿಂಹ ರಾಶಿಯವರಿಗೆ ಇಂದು ಮಾತಿನಿಂದ ತೊಂದರೆಯಾಗಲಿದ್ದು, ಕುಟುಂಬದಲ್ಲಿ ಘರ್ಷಣೆಯಾಗಲಿದೆ. ಸ್ತ್ರೀಯರಿಗೆ ಹಣಕಾಸಿನ ವ್ಯತ್ಯಾಸವಾಗಲಿದೆ. ವೃತ್ತಿಯಲ್ಲಿ ಮಂದತೆ ಉಂಟಾಗಲಿದ್ದು, ಹೆಣ್ಣು ಮಕ್ಕಳಿಗೆ ತೊಡಕಿದೆ. ಇಂದು ಈಶ್ವರನ ಪ್ರಾರ್ಥನೆ ಮಾಡಿ.
ಇದನ್ನೂ ವೀಕ್ಷಿಸಿ: News Hour: ವಿಧಾನಸಭೆಯಲ್ಲೇ ಮಹಿಳೆಯರ ಬಗ್ಗೆ ಸಿಎಂ ಅಶ್ಲೀಲ ಮಾತು, ಪ್ರಧಾನಿಯಿಂದಲೂ ಟೀಕೆ!