ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಮಂಗಳವಾರ, ದಶಮಿ ತಿಥಿ, ಮಖಾ ನಕ್ಷತ್ರ.
ಮಂಗಳವಾರ ಆಗಿರುವುದರಿಂದ ಸುಬ್ರಹ್ಮಣ್ಯ ಸ್ವಾಮಿ ಮತ್ತು ಅಮ್ಮನವರ ಪ್ರಾರ್ಥನೆ ಮಾಡಿ. ಕುಜನಿಗೆ ಮಂಗಳವಾರ ವಿಶಿಷ್ಟ ಶಕ್ತಿ ಇರುತ್ತದೆ. ಕುಜ ದೋಷ ನಿವಾರಣೆಗೆ ತೊಗರಿ ಮತ್ತು ಕೆಂಪು ವಸ್ತ್ರವನ್ನು ದಾನ ಮಾಡಿ. ತುಲಾ ರಾಶಿಯವರಿಗೆ ಇಂದು ಲಾಭದ ದಿನವಾಗಿದೆ. ವೃತ್ತಿಯಲ್ಲಿ ಅನುಕೂಲವಿದ್ದು, ಪ್ರಶಂಸೆ ದೊರೆಯಲಿದೆ. ವಿದೇಶದಿಂದ ಉತ್ತಮ ವರ್ತಮಾನ ಬರುವ ಸಾಧ್ಯತೆ ಇದೆ. ಗೃಹ ನಿರ್ಮಾಣ ಸ್ಥಳದಲ್ಲಿ ವಿಷಜಂತುಗಳ ಭಯವಿದ್ದು, ಗ್ರಾಮದೇವತಾ ದರ್ಶನ ಮಾಡಿ.
ಇದನ್ನೂ ವೀಕ್ಷಿಸಿ: News Hour: ಪಂಚ ರಾಜ್ಯ ಚುನಾವಣೆಗೆ ಕರ್ನಾಟಕವೇ ಬ್ರಹ್ಮಾಸ್ತ್ರ!