ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷ,ಶುಕ್ರವಾರ, ಚತುರ್ಥಿ ತಿಥಿ, ಪೂರ್ವಾಷಾಢ ನಕ್ಷತ್ರ.
ಇಂದು ರವಿ ಸಂಕ್ರಮಣ ಇದ್ದು, ವೃಶ್ಚಿಕ ರಾಶಿಯನ್ನು ರವಿ ಪ್ರವೇಶ ಮಾಡುತ್ತಿದ್ದಾನೆ. ರವಿ ನೀಚ ಸ್ಥಾನದಲ್ಲಿ ಇದ್ದಾಗ, ಎಲ್ಲಾರಿಗೂ ಆರೋಗ್ಯ ಸಮಸ್ಯೆ ಕಾಡುತ್ತದೆ. ವೃಶ್ಚಿಕ ರಾಶಿಯನ್ನು ರವಿ ಪ್ರವೇಶಿಸಿದ್ದರಿಂದ ಎಲ್ಲಾ ರಾಶಿಯವರಿಗೂ ಬಲ ಬರಲಿದೆ. ಇಂದು ಸೂರ್ಯನ ಆರಾಧನೆಯನ್ನು ಮಾಡಿ. ಕಾರ್ತಿಕ ಮಾಸ ಇರುವುದರಿಂದ ಪಿತೃ ದೇವತೆಗಳನ್ನು ನೆನೆಯಿರಿ.
ಇದನ್ನೂ ವೀಕ್ಷಿಸಿ: 11ನೇ ಅಧ್ಯಕ್ಷರಾಗಿ ಆಯ್ಕೆಯಾದ ವಿಜಯೇಂದ್ರ..! ಕೇಸರಿ ಸೈನ್ಯವನ್ನ ಮುನ್ನಡೆಸಿದ ನಾಯಕರು ಇವರು..!