ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷ,ಗುರುವಾರ, ತೃತೀಯ ತಿಥಿ, ಮೂಲ ನಕ್ಷತ್ರ.
ಈ ತೃತೀಯ ಸಂದರ್ಭದಲ್ಲಿ ತ್ರಿಲೋಚನ ಗೌರಿ ಆರಾಧನೆ ಮಾಡಲಾಗುತ್ತದೆ. ಈಕೆ ಹೆಣ್ಮಕ್ಕಳಿಗೆ ಮಾಂಗಲ್ಯ ಭಾಗ್ಯವನ್ನು ನೀಡುತ್ತಾಳೆ. ಕಾರ್ತಿಕ ಮಾಸದಲ್ಲಿ ತ್ರಿಲೋಚನ ಗೌರಿ ವ್ರತ ಮಾಡಲಾಗುತ್ತದೆ. ಇಂದು ಲಲಿತಾ ಸಹಸ್ರನಾಮವನ್ನು ಹೇಳಿ. ಇದರಿಂದ ನಿಮ್ಮ ಸಂಕಷ್ಟಗಳು ದೂರವಾಗಲಿವೆ. ಇಂದು ಕುಜ ಪರಿವರ್ತನೆ ಇದೆ. ಕುಜ ಗ್ರಹ ತನ್ನ ಸ್ವಕ್ಷೇತ್ರಕ್ಕೆ ಬರಲಿದ್ದಾನೆ. ಇದರಿಂದ ಯಾವ ರಾಶಿಯವರಿಗೂ ತೊಂದರೆ ಉಂಟಾಗುವುದಿಲ್ಲ.
ಇದನ್ನೂ ವೀಕ್ಷಿಸಿ: ವಿಜಯೇಂದ್ರ ಕೇವಲ ಯಡಿಯೂರಪ್ಪ ಬಣಕ್ಕೆ ಮಾತ್ರ ಅಧ್ಯಕ್ಷರು, ಕಾಂಗ್ರೆಸ್ ಟಾಂಗ್!