ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಶುಕ್ರವಾರ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ.
ಆಷಾಢ ದ್ವಾದಶಿಯಿಂದ ರಥಗಳು ಆರಂಭವಾಗುತ್ತವೆ. ಇಂದು ಶಾಖ ರಥವಿದೆ. ಶಾಖ ರಥವೆಂದರೇ, ಈ ಸಮಯದಲ್ಲಿ ತರಕಾರಿಗಳು ಸಿಗುವುದು ತುಂಬಾ ಕಷ್ಟ. ಏಕೆಂದರೆ ಈ ಸಮಯದಲ್ಲಿ ಮಳೆಗಾಲ ಪ್ರಾರಂಭವಾಗುವುದರಿಂದ ಕೃಷಿಯನ್ನು ಈಗ ಆರಂಭಿಸಲಾಗುತ್ತದೆ. ಹಾಗಾಗಿ ತರಕಾರಿಗಳನ್ನು ಬಿಟ್ಟು, ಬೇರೆ ಪದಾರ್ಥಗಳಿಂದ ಜೀವನವನ್ನು ನಡೆಸುವುದಾಗಿದೆ. ಈ ವೇಳೆ ಕುಜ ಗ್ರಹ ಸಿಂಹ ರಾಶಿಗೆ ಪ್ರವೇಶ ಮಾಡುತ್ತಾನೆ. ಆಷಾಢ ಮಾಸದ ಎರಡನೇ ಶುಕ್ರವಾರ ಲಕ್ಷ್ಮೀ ಆರಾಧನೆಗೆ ತುಂಬಾ ಪ್ರಶಕ್ತವಾದ ದಿನವಾಗಿದೆ.
ಇದನ್ನೂ ವೀಕ್ಷಿಸಿ: ಅಕ್ಕಿ ಬದಲು ಖಾತೆಗೆ ಹಣ, ಕಾಂಗ್ರೆಸ್ ನಡೆ ಪ್ರಶ್ನಿಸಿದ ಬಿಜೆಪಿ ಬಣ!