ಇಂದು ಜ್ಯೋತಿರ್ಭೀಮೇಶ್ವರ ಅಮಾವಾಸ್ಯೆ: ಈ ರಥ ಆಚರಣೆ ಹಿಂದಿನ ಮಹತ್ವೇನು ಗೊತ್ತಾ ?

Jul 17, 2023, 9:02 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಸೋಮವಾರ, ಅಮಾವಾಸ್ಯೆ ತಿಥಿ, ಪುನರ್ವಸು ನಕ್ಷತ್ರ. 

ಈ ದಿನ ಎರಡು ವಿಶೇಷತೆ ಇದ್ದು, ಒಂದು ದಕ್ಷಿಣಾಯನ ಪುಣ್ಯಕಾಲ ಮತ್ತು ರವಿಯ ಸಂಕ್ರಮಣ ಇದೆ. ಕರ್ಕಟ ರಾಶಿಗೆ ಇಂದು ಸೂರ್ಯ ಪ್ರವೇಶಿಸುತ್ತಿದ್ದಾನೆ. ಈ ಸಮಯದಲ್ಲಿ ರಾತ್ರಿ ಜಾಸ್ತಿ ಇದ್ದು, ದೇವತೆಗಳ ನಿದ್ರಾ ಸಮಯ ಇದಾಗಿದೆ. ಅಲ್ಲದೇ ಇಂದು ಭೀಮನ ಅಮಾವಾಸ್ಯೆ ಇದೆ. ಈ ದಿನ ವಿವಾಹಿತ ಮಹಿಳೆಯರು ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಪೂಜೆಯನ್ನು ಮಾಡಿದರೆ, ಅವಿವಾಹಿತ ಮಹಿಳೆಯರು ತಮ್ಮ ತಂದೆ, ಸಹೋದರರ ಆಯಸ್ಸು ಮತ್ತು ಆರೋಗ್ಯಕ್ಕಾಗಿ ಪೂಜೆಯನ್ನು ಮಾಡುತ್ತಾರೆ.

ಇದನ್ನೂ ವೀಕ್ಷಿಸಿ:  ಟ್ರೈಲರ್ ರಿಲೀಸ್ ಕಾರ್ಯಕ್ರಮ: ಹಿರಿಯ ಕಲಾವಿದ ಅಂದವರಿಗೆ ಫನ್ನಿಯಾಗಿ ಕಿಚಾಯಿಸಿದ ಸುದೀಪ್!