Panchang: ಮಾರ್ಗಶೀರ್ಷ ಲಕ್ಷ್ಮೀ ವ್ರತದಿಂದ ಜ್ಞಾನವೃದ್ಧಿ

Dec 15, 2022, 9:20 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಗುರುವಾರ, ಸಪ್ತಮಿ ತಿಥಿ, ಪುಬ್ಬ(ಪೂರ್ವ ಫಲ್ಗುಣಿ) ನಕ್ಷತ್ರ.  

ಪೂರ್ವ ಫಲ್ಗುಣಿ ನಕ್ಷತ್ರದ ವೈಶಿಷ್ಠ್ಯಗಳೇನು? ಗುರುವಾರ ಸಪ್ತಮಿ ತಿಥಿ ಬಹಳ ಮಂಗಳಕರವಾಗಿದೆ. ಮಾರ್ಗಶೀರ್ಷ ಲಕ್ಷ್ಮೀ ವ್ರತವನ್ನು ಈ ದಿನ ಆಚರಿಸಬೇಕು. ಗುರು ಪೂಜೆಯನ್ನು ಮಾಡಬೇಕು. ಇದರಿಂದ ಜ್ಞಾನಾರ್ಜನೆಯಾಗುವುದು.  ಈ ದಿನದ ವಿಶೇಷ, ಇದರೊಂದಿಗೆ ವೀಕ್ಷಕರ ಸಂದೇಶಗಳಿಗೆ ಸಮಾಧಾನಕರ ಉತ್ತರ, ದ್ವಾದಶ ರಾಶಿಗಳ ದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ.

ಕಾಳ ಸರ್ಪ ದೋಷ ಜಾತಕದಲ್ಲಿದ್ದರೆ ಯಾವೆಲ್ಲ ತೊಂದರೆ ಎದುರಾಗುತ್ತದೆ?