Today Horoscope: ಮೇಷ ರಾಶಿಯವರ ಆರೋಗ್ಯದಲ್ಲಿ ಏರುಪೇರು ಆಗಲಿದ್ದು, ಲಲಿತಾ ಪ್ರಾರ್ಥನೆ ಮಾಡಿ

Aug 6, 2023, 9:08 AM IST

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಅಧಿಕ ಶ್ರಾವಣ ಮಾಸ, ಕೃಷ್ಣ ಪಕ್ಷ, ಭಾನುವಾರ, ಪಂಚಮಿ ತಿಥಿ, ಉತ್ತರಾಭಾದ್ರ ನಕ್ಷತ್ರ.

ಪಂಚಮಿ ತಿಥಿ ತುಂಬಾ ಶ್ರೇಷ್ಠವಾಗಿದ್ದು, ಈ ದಿನ ಲಲಿತಾ ಸಹಸ್ರನಾಮ ಪಠಣ ಮಾಡಿ. ಇದು ಮನುಷ್ಯನ ಅಂತರಂಗ ಮತ್ತು ಬಹಿರಂಗ ಶುದ್ಧತೆಗೆ ಉತ್ತಮವಾಗಿದೆ. ಈ ದಿನ ಮೇಷ ರಾಶಿಯವರ ಆರೋಗ್ಯದಲ್ಲಿ ಏರುಪೇರು ಆಗಲಿದೆ. ಸ್ತ್ರೀಯರಿಗೆ ವ್ಯಯವಾಗಲಿದೆ. ಲಲಿತಾ ಪ್ರಾರ್ಥನೆ ಮಾಡಿ. ಈ ದಿನ ಮಿಥುನ ರಾಶಿಯವರಿಗೆ ವೃತ್ತಿಯಲ್ಲಿ ಅನುಕೂಲವಿದ್ದು, ದಾಂಪತ್ಯದಲ್ಲಿ ಅಸಮಾಧಾನವಿರಲಿದೆ. ಲಕ್ಷ್ಮೀನಾರಾಯಣ ಹೃದಯ ಪಠಿಸಿ.

ಇದನ್ನೂ ವೀಕ್ಷಿಸಿ:  ನ್ಯೂಸ್‌ ಅವರ್ ಸ್ಪೆಶಲ್‌ನಲ್ಲಿ ಸಿ.ಟಿ.ರವಿ: ವಿಪಕ್ಷ ನಾಯಕನ ಆಯ್ಕೆ ಬಗ್ಗೆ ಹೇಳಿದ್ದೇನು?