ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲ ಪಕ್ಷ, ಗುರುವಾರ, ಪೌರ್ಣಮಿ ತಿಥಿ, ಪೂರ್ವಾಭಾದ್ರ ನಕ್ಷತ್ರ.
ಈ ದಿನ ವೃಷಭ ರಾಶಿಯವರಿಗೆ ಬಂಧು ಮಿತ್ರರ ಸಹಾಯ ದೊರೆಯಲಿದೆ. ಆರೋಗ್ಯ ಸುಧಾರಿಸಲಿದ್ದು, ಗಾಯವಾಗುವ ಸಾಧ್ಯತೆ ಇದೆ. ಹಾಗಾಗಿ ಈ ರಾಶಿಯವರು ಇಂದು ದುರ್ಗಾ ಪ್ರಾರ್ಥನೆ ಮಾಡಿ ಮತ್ತು ಪಂಚಾಮೃತ ಅಭಿಷೇಕ ಮಾಡಿಸಿ. ಇನ್ನೂ ಕರ್ಕಟಕ ರಾಶಿಯವರಿಗೆ ಮಾನಸಿಕ ಖಿನ್ನತೆ, ಪ್ರಯಾಣದಲ್ಲಿ ತೊಡಗು, ಸ್ನೇಹಿತರ ಜೊತೆ ಕಲಹ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಇಂದು ಅಮ್ಮನವರ ಸನ್ನಿಧಾನಕ್ಕೆ ಹೋಗಿ ಅಕ್ಕಿ, ಎಳ್ಳು, ಅವರೆ ದಾನ ಮಾಡಿ.
ಇದನ್ನೂ ವೀಕ್ಷಿಸಿ: News Hour: ರಕ್ಷಾಬಂಧನ ಹಬ್ಬದ ದಿನವೇ ಮನೆಗೆ ಬಂದ ಗೃಹಲಕ್ಷ್ಮೀ!