ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಅಧಿಕ ಶ್ರಾವಣ ಮಾಸ, ಕೃಷ್ಣ ಪಕ್ಷ, ಗುರುವಾರ, ನವಮಿ ತಿಥಿ, ಕೃತ್ತಿಕಾ ನಕ್ಷತ್ರ.
ಕೃತ್ತಿಕಾ ನಕ್ಷತ್ರ ದಿನ ದೀಪ ದಾನವನ್ನು ಮಾಡಿ. ಸುಬ್ರಹ್ಮಣ್ಯ ಸ್ವಾಮಿ ಆರಾಧನೆ ಮಾಡಿ. ಪಂಚಾಮೃತ, ರುದ್ರಾಭಿಷೇಕ, ವಸ್ತ್ರದಾನ ಎಲ್ಲವನ್ನು ಮಾಡಬಹುದಾಗಿದೆ. ಸಿಂಹ ರಾಶಿಯವರಿಗೆ ಈ ದಿನ ವೃತ್ತಿಯಲ್ಲಿ ಪ್ರಶಂಸೆ ಸಿಗಲಿದೆ. ಸ್ತ್ರೀಯರಿಗೆ ಮಾನ್ಯತೆ ದೊರೆಯಲಿದೆ. ಕನ್ಯಾ ರಾಶಿಯವರು ಈ ದಿನ ದೇವತಾ ಕಾರ್ಯಕಗಳಲ್ಲಿ ಭಾಗಿಯಾಗುತ್ತೀರಿ.
ಇದನ್ನೂ ವೀಕ್ಷಿಸಿ: ಕಲ್ಲು ಹೃದಯವನ್ನೂ ಕರಗಿಸಿದ ಸ್ಪಂದನಾ ಅಂತಿಮ ವಿಧಿ ವಿಧಾನ, ವಿಜಯ್ ಕುಟುಂಬಕ್ಕೆ ಸಾಂತ್ವನ!