ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ಶುಕ್ರವಾರ, ನವಮಿ ತಿಥಿ, ಅಶ್ವಿನಿ ನಕ್ಷತ್ರ.
ಶುಕ್ರವಾರ ನವಮಿ ಬಂದಿರುವುದರಿಂದ ಅಮ್ಮನವರ ಪ್ರಾರ್ಥನೆ ಮಾಡಿ. ದುರ್ಗಾರಾಧನೆಯಿಂದ ಬಲ, ಕಷ್ಟಗಳು ಹಾಗೂ ಮನಸ್ಸಿನ ವಾತಾವರಣ ತಿಳಿಯಾಗಲಿದೆ. ಮೇಷ ರಾಶಿಯವರಿಗೆ ಇಂದು ಗಜ ಕೇಸರಿ ಯೋಗವಿದ್ದು, ಸುಖ ಸಮೃದ್ಧಿ. ಕುಟುಂಬ ಸೌಖ್ಯ. ತಂದೆ-ತಾಯಿಗಳ ಸಹಕಾರ ಇರಲಿದೆ. ವೃತ್ತಿಯಲ್ಲಿ ಅನುಕೂಲ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ. ಸಿಂಹ ರಾಶಿಯವರಿಗೆ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ. ವೃತ್ತಿಯಲ್ಲಿ ಅನುಕೂಲ. ಧರ್ಮಕಾರ್ಯಗಳಲ್ಲಿ ಭಾಗಿ. ಶಿವ-ಶಕ್ತಿಯರ ಪ್ರಾರ್ಥನೆ ಮಾಡಿ.
ಇದನ್ನೂ ವೀಕ್ಷಿಸಿ: ಮಂದಿರ ಉದ್ಘಾಟನೆಯಲ್ಲಿ ರಾಜಕೀಯ ಮಾಡುತ್ತಿರುವವರು ಯಾರು..?