ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷ,ಗುರುವಾರ, ದಶಮಿ ತಿಥಿ, ಹಸ್ತ ನಕ್ಷತ್ರ.
ಈ ದಿನ ಮಂಗಲ ಕಾರ್ಯಗಳಿಗೆ ಯೋಗ್ಯವಾಗಿದೆ. ಜೊತೆಗೆ ಗುರುವಾರ ಆಗಿರುವುದರಿಂದ ದತ್ತಾತ್ರೇಯರ ಆರಾಧನೆ ಮಾಡಿ. ವೃಷಭ ರಾಶಿಯವರಿಗೆ ವೃತ್ತಿಯಲ್ಲಿ ಅನುಕೂಲವಿದ್ದು, ಕಡಿಮೆ ವ್ಯಯ. ಗಂಟಲ ಬಾಧೆ. ದಾಯಾದಿ ಕಲಹ. ಕೆಟ್ಟ ಸಲಹೆಗಳಿಂದ ಕಾರ್ಯ ಹಾನಿಯಾಗುವ ಸಾಧ್ಯತೆ ಇದೆ. ಇಂದು ಈಶ್ವರ ಪ್ರಾರ್ಥನೆ ಮಾಡಿ. ಧನಸ್ಸು ರಾಶಿಯವರಿಗೆ ವೃತ್ತಿಯಲ್ಲಿ ಅನುಕೂಲ. ಕಟು ಮಾತಿನಿಂದ ತೊಂದರೆ. ಹಣಕಾಸಿನ ತೊಂದರೆ. ಕುಟುಂಬದಲ್ಲಿ ಮನಸ್ತಾಪ. ಈಶ್ವರನಗೆ ರುದ್ರಾಭಿಷೇಕ ಮಾಡಿಸಿ.
ಇದನ್ನೂ ವೀಕ್ಷಿಸಿ: ಬಿಜೆಪಿಯಿಂದ ಆಗಿಲ್ಲ, ನಮ್ಮವರಿಂದಲೇ ಚೂರಿ; ಸ್ವಪಕ್ಷೀಯರ ಕುಟುಕಿದ ಬಿಕೆ ಹರಿಪ್ರಸಾದ್!