ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಶ್ರೀ ಶೋಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ಮಂಗಳವಾರ, ಪೌರ್ಣಮಿ ತಿಥಿ, ಮೃಗಶಿರ ನಕ್ಷತ್ರ.
ಇಂದು ದತ್ತ ಜಯಂತಿ ಇದೆ. ಅವರ ತ್ರಿಮೂರ್ತಿ ಸ್ವರೂಪವಾಗಿದ್ದಾರೆ. ಕರ್ಕಟಕ ರಾಶಿಯವರಿಗೆ ಲಾಭದ ದಿನ. ಪ್ರಶಂಸೆ ಸಿಗಲಿದೆ. ದ್ರವ ಪದಾರ್ಥಗಳಿಂದ ಲಾಭ. ವೃತ್ತಿಯಲ್ಲಿ ಕಿರಿಕಿರಿ. ದತ್ತಾತ್ರೇಯ ಪ್ರಾರ್ಥನೆ ಮಾಡಿ. ಸಿಂಹ ರಾಶಿಯವರಿಗೆ ಬೌದ್ಧಿಕ ಬಲ. ವೃತ್ತಿಯಲ್ಲಿ ಅನುಕೂಲ. ಸ್ತ್ರೀಯರಿಗೆ ಅಧಿಕಾರ. ತಂದೆ-ಮಕ್ಕಳಲ್ಲಿ ಭಿನ್ನಾಭಿಪ್ರಾಯ. ಗುರು ಸೇವೆ ಮಾಡಿ. ಕನ್ಯಾ ರಾಶಿಯವರಿಗೆ ವೃತ್ತಿಯಲ್ಲಿ ಬಲ. ದೇವತಾಕಾರ್ಯಗಳಲ್ಲಿ ಭಾಗಿ. ತಂದೆ-ಮಕ್ಕಳಲ್ಲಿ ಸಾಮರಸ್ಯ. ಕೆಲಸದಲ್ಲಿ ವಿಶೇಷ ಫಲ. ವಾಗ್ವಾದಗಳಾಗಲಿವೆ. ಗುರು ಸನ್ನಿಧಾನದಲ್ಲಿ ಕಡಲೆ ದಾನ ಮಾಡಿ.
ಇದನ್ನೂ ವೀಕ್ಷಿಸಿ: ಗೋವಿಗೆ ಸೀಮಂತ ಕಾರ್ಯ: ಗೋ ಪ್ರೇಮ ಮೆರೆದ ರೈತ ಕುಟುಂಬ