ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಶ್ರೀ ಶೋಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ,ಗುರುವಾರ, ನವಮಿ ತಿಥಿ, ರೇವತಿ ನಕ್ಷತ್ರ.
ಈ ಗುರುವಾರ ಮಾರ್ಗಶಿರ ಲಕ್ಷ್ಮೀ ಆರಾಧನೆ ಮಾಡಿ. ಬೇಳೆಯಿಂದ ಮಾಡಿರುವ ತೊವೆಯನ್ನು ನೈವೇದ್ಯ ಮಾಡಿ ಸ್ವೀಕರಿಸಿ. ಜೊತೆಗೆ ಲಕ್ಷ್ಮೀ ಅಷ್ಟೋತ್ತರ ಹೇಳಿ. ತುಲಾ ರಾಶಿಯವರಿಗೆ ವೃತ್ತಿಯಲ್ಲಿ ವಿರೋಧ. ಮನಸ್ಸು ಚಂಚಲವಾಗುತ್ತದೆ. ಉದರ ಬಾಧೆ. ಮಕ್ಕಳಿಂದ ಮನಸ್ತಾಪ. ನಾಗ ಪ್ರಾರ್ಥನೆ ಮಾಡಿ. ವೃಶ್ಚಿಕ ರಾಶಿಯವರಿಗೆ ಮಕ್ಕಳಲ್ಲಿ ವಿರೋಧ. ಬುದ್ಧಿಶಕ್ತಿ ಹಾಳಾಗುತ್ತದೆ. ಉದರ ಬಾಧೆ. ಉಪನ್ಯಾಸಕರಿಗೆ ಉತ್ತಮಫಲ. ಆರೋಗ್ಯ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಸುಬ್ರಹ್ಮಣ್ಯ ಕವಚ ಪಠಿಸಿ.
ಇದನ್ನೂ ವೀಕ್ಷಿಸಿ: ರಾಮರಥ ಸಾರಥಿಗಳಿಗೆ ಬರಬೇಡಿ ಅಂದದ್ದೇಕೆ? ದೇವೇಗೌಡರಿಗೆ ದೊರೆತ ಆಹ್ವಾನ.. ಬಿಜೆಪಿ ದಿಗ್ಗಜರಿಗೆ ಏಕಿಲ್ಲ..?