ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ,ಶುಕ್ಲ ಪಕ್ಷ, ಶನಿವಾರ, ಚತುರ್ಥಿ ತಿಥಿ, ಉತ್ತರಾಷಾಢ ನಕ್ಷತ್ರ.
ಇಂದು ಸೂರ್ಯ ಸಂಕ್ರಮಣ ಇದೆ. ಸೂರ್ಯ ಧನಸ್ಸು ರಾಶಿಗೆ ಪ್ರವೇಶ ಮಾಡುತ್ತಾನೆ. ಇನ್ನೂ ಒಂದು ತಿಂಗಳ ಕಾಲ ಧನುರ್ಮಾಸ ಇರುತ್ತದೆ. ಧನುರ್ಮಾಸದಲ್ಲಿ ಹೆಸರು ಬೇಳೆಯಿಂದ ಮಾಡುವ ಪೊಂಗಲ್ ಅಥವಾ ಸಿಹಿ ಪೊಂಗಲ್‌ನನ್ನು ವಿಷ್ಣು ದೇವಸ್ಥಾನಕ್ಕೆ ಸಮರ್ಪಿಸಿದ್ರೆ, ತುಂಬಾ ಪುಣ್ಯ ಬರುತ್ತದೆ ಎಂದು ಹೇಳಲಾಗುತ್ತದೆ. ಹೆಸರು ಬೇಳೆ ವಿಷ್ಣುಗೆ ಇಷ್ಟವಾದ ಧಾನ್ಯವಾಗಿದೆ. ಸೂರ್ಯೋಧಯಕ್ಕೂ ಮುನ್ನ ಎದ್ದು ಪೂಜೆ ಮಾಡಬೇಕು.
ಇದನ್ನೂ ವೀಕ್ಷಿಸಿ: News Hour: ಸಂಸತ್‌ನಲ್ಲಿ ಸ್ಮೋಕ್ ಬಾಂಬ್ ದಾಳಿಗೆ ಹಣದ ಮೂಲ ಯಾವುದು?