Oct 2, 2019, 1:44 PM IST
ಮಹಾತ್ಮ ಗಾಂಧಿ 150ನೇ ಜನ್ಮದಿನ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿ ಸಾಕಷ್ಟು ಗಣ್ಯರು ಗಾಂಧಿ ಅವರನ್ನು ನೆನೆದಿದ್ದಾರೆ. ರಾಜ್ಘಾಟ್ನಲ್ಲಿರುವ ಗಾಂಧಿಜಿ ಸ್ಮಾರಕಕ್ಕೆ ತೆರಳಿದ ಮೋದಿ ನಮನ ಸಲ್ಲಿಸಿದರು. ಅವರು ಸಂಸತ್ತಿಗೆ ತೆರಳಿ ಮಹಾತ್ಮನಿಗೆ ಗೌರವ ಸೂಚಿಸಲಿದ್ದಾರೆ. ಸಂಜೆ ಮೋದಿ ಗಾಂಧಿಜಿ ಉಪ್ಪಿನ ಸತ್ಯಾಗ್ರಹ ನಡೆದಿದ್ದ ಸಬರಮತಿ ಆಶ್ರಮಕ್ಕೂ ತೆರಳಲಿದ್ದಾರೆ.