ಮನ್ಸೂರ್ ಖಾನ್‌ನನ್ನು ಏರ್‌ಪೋರ್ಟ್‌ವರೆಗೆ ಬೀಳ್ಕೊಟ್ರಾ ರಾಜಕಾರಣಿ?

Jul 3, 2019, 4:07 PM IST

ಬೆಂಗಳೂರು (ಜು.03): IMA ವಂಚನೆ ಪ್ರಕರಣದಲ್ಲಿ ಸ್ಥಳೀಯ ರಾಜಕಾರಣಿಗಳ ಕೈವಾಡದ ಬಗ್ಗೆ ಇನ್ನಷ್ಟು ಸ್ಫೋಟಕ ಮಾಹಿತಿಗಳು ಸುವರ್ಣನ್ಯೂಸ್‌ಗೆ ಲಭ್ಯವಾಗಿದೆ. ಚಿನ್ನವನ್ನು ಮಾರಲು ಹಾಗೂ ದೇಶ ಬಿಟ್ಟು ಪರಾರಿಯಾಗಲು ಮನ್ಸೂರ್ ಖಾನ್‌ಗೆ ಆ ರಾಜಕಾರಣಿ ಸಹಕರಿಸಿದ್ದ ಎಂದು ತಿಳಿದು ಬಂದಿದೆ.  ಈ ಬಗ್ಗೆ ನಮ್ಮ ಪ್ರತಿನಿಧಿ ರಮೇರ್ಶ ಹೆಚ್ಚಿನ ಮಾಹಿತಿಯನ್ನು ನೀಡಿದ್ದಾರೆ.

ಲಕ್ಷಾಂತರ ಹೂಡಿಕೆದಾರರನ್ನು ನಡುನೀರಿನಲ್ಲಿ ಬಿಟ್ಟು IMA ಸಂಸ್ಥೆ ಮಾಲೀಕ ಮನ್ಸೂರ್ ಖಾನ್ ನಾಪತ್ತೆಯಾಗಿದ್ದಾನೆ. ಹಲಾಲ್ ಹೂಡಿಕೆ ಹೆಸರಿನಲ್ಲಿ ಕೋಟ್ಯಂತರ ರೂ. ಪಂಗನಾಮ ಹಾಕಿ ಮನ್ಸೂರ್ ಖಾನ್ ವಿದೇಶಕ್ಕೆ ಹಾರಿದ್ದಾನೆ. ಮೊದಲು ಬಿಡುಗಡೆ ಮಾಡಿದ್ದ ಆಡಿಯೋ ಸಂದೇಶದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದ ಖಾನ್, ಹೊಸ ವಿಡಿಯೋದಲ್ಲಿ ಶರಣಾಗುವ ಬಗ್ಗೆ ಮಾತನಾಡಿದ್ದನು.