ಕೇನ್ಸ್ ಫೆಸ್ಟಿವಲ್​ನಲ್ಲಿ ವೇಶ್ಯೆ ಪಾತ್ರಧಾರಿ ಶೋಭಿತಾ: ಗೋಲ್ಡನ್​ ಡ್ರೆಸ್​ನಲ್ಲಿ ಮತ್ಸ್ಯಕನ್ಯೆಯಂತೆ ಕಂಡ ನಟಿ

Published : May 19, 2024, 09:27 PM IST

ಫ್ರಾನ್ಸ್‌ನಲ್ಲಿ ನಡೆಯುತ್ತಿರುವ 77ನೇ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ಹೆಜ್ಜೆ ಹಾಕುವ ಮೂಲಕ ನಟಿ ಶೋಭಿತಾ ಧೂಳಿಪಾಲ ಗಮನ ಸೆಳೆದರು. ಗೋಲ್ಡನ್ ಕಲರ್ ಗೌನ್‌ನಲ್ಲಿ ನಟಿಮಣಿ ಮಿಂಚು ಹರಿಸಿದ್ದಾರೆ.

PREV
18
ಕೇನ್ಸ್ ಫೆಸ್ಟಿವಲ್​ನಲ್ಲಿ ವೇಶ್ಯೆ ಪಾತ್ರಧಾರಿ ಶೋಭಿತಾ: ಗೋಲ್ಡನ್​ ಡ್ರೆಸ್​ನಲ್ಲಿ ಮತ್ಸ್ಯಕನ್ಯೆಯಂತೆ ಕಂಡ ನಟಿ

ಕೇನ್ಸ್ ಫಿಲ್ಮ್ ಫೆಸ್ಟ್‌ನಲ್ಲಿ ಬಾಲಿವುಡ್ ನಟಿಯರು ಮಿಂಚುತ್ತಿದ್ದಾರೆ. ನಟಿ ಶೋಭಿತಾ ಧೂಳಿಪಾಲ ಅವರು ಇನ್ ಸ್ಟಾಗ್ರಾಮ್‌ನಲ್ಲಿ ಕೇನ್ಸ್ ಚಲನಚಿತ್ರೋತ್ಸವದ ಸೆಕೆಂಡ್ ಲುಕ್ ಹಂಚಿಕೊಂಡಿದ್ದಾರೆ. ಚಿನ್ನದ ಬಣ್ಣದ ಉಡುಗೆಯಲ್ಲಿ ಶೋಭಿತಾ ಅಭಿಮಾನಿಗಳ ಕಣ್ಣಲ್ಲಿ ಧೂಳೆಬ್ಬಿಸಿದ್ದಾರೆ. 

28

ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಫೋಟೋಗಳಿಗೆ ಶೋಭಿತಾ ಅವರು 'ಕಾನ್‌ ಲಾಂಜ್‌ನಲ್ಲಿ ಚಿನ್ನದ ಡ್ರ್ಯಾಗನ್‌ನಂತೆ ಸುತ್ತಾಡುತ್ತಿದ್ದೇನೆ' ಎಂದು ಶೀರ್ಷಿಕೆ ನೀಡಿದ್ದರು. ಈ ಲುಕ್‌ನಲ್ಲಿ ನೀವು ಮತ್ಸ್ಯಕನ್ಯೆ, ಆಸ್ಕರ್‌ ಟ್ರೋಫಿಯಂತೆ ಕಾಣಿಸುವಿರಿ ಎಂದು ಫ್ಯಾನ್ಸ್‌ ಕಾಮೆಂಟ್‌ ಮಾಡಿದ್ದಾರೆ.

38

ಶೋಭಿತಾ ಧೂಳಿಪಾಲ ಅವರು ಚಿನ್ನದ ಬಾಡಿಕಾನ್‌ ಡ್ರೆಸ್ ಧರಿಸಿದ್ದರು. ಇದಕ್ಕೆ ಸೂಕ್ತವಾಗುವಂತಹ ಉದ್ದನೆಯ ಕಿವಿಯೋಲೆಗಳನ್ನು ಧರಿಸಿದ್ದರು. ಕೂದಲನ್ನು ಬನ್‌ ರೂಪದಲ್ಲಿ ಕಟ್ಟಿದ್ದರು. ಹೈಹೀಲ್ಡ್‌ ಧರಿಸುವ ಮೂಲಕ ಕಾನ್‌ ಚಿತ್ರೋತ್ಸವದಲ್ಲಿ ಎಲ್ಲರ ಗಮನ ಸೆಳೆದರು.

48

ಶೋಭಿತಾ ಧೂಳಿಪಾಲ ಗೋಲ್ಡನ್ ಡ್ರೆಸ್‌ನಲ್ಲಿ​ ಗೊಂಬೆಯಂತೆ ಕಾಣ್ತಿದ್ದಾರೆ. ಧೂಳಿಪಾಲ ಫೋಟೋಸ್‌ ನೋಡಿ ನಿಮ್ಮ ಕಣ್ಣುಗಳು 90ರ ದಶಕದ ನಟಿಯರಂತೆ ಇದೆ ವಾಹ್‌, ನಿಮ್ಮ ಸೌಂದರ್ಯ ಹೊಗಳಲು ಪದಗಳಿಲ್ಲ, ಕನಸಲ್ಲಿ ಬರುವ ಸುಂದರಿ ಎಂದು ನೆಟ್ಟಿಗರು ತರೇಹವಾರಿ ಕಮೆಂಟ್ ಮಾಡ್ತಿದ್ದಾರೆ. 

58

ಇದೇ ಮೊದಲ ಬಾರಿಗೆ ಶೋಭಿತಾ ಧೂಳಿಪಾಲ ಅವರು ಕಾನ್‌ ಚಿತ್ರೋತ್ಸವದಲ್ಲಿ ಭಾಗಿಯಾಗಿದ್ದಾರೆ. ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಶೋಭಿತಾ ಬೇರೆ ರೀತಿಯ ಉಡುಗೆ ಧರಿಸಿದ್ದರು. ಹೊಳೆಯುವ ನೇರಳೆ ಬಣ್ಣದ ಉಡುಗೆ ಮತ್ತು ಹೈಹೀಲ್ಡ್ಸ್‌ ಧರಿಸಿದ್ದರು. 
 

68

ಇತ್ತೀಚೆಗಷ್ಟೇ ಹಾಲಿವುಡ್ ಚಿತ್ರ ಮಂಕಿ ಮ್ಯಾನ್‌ನಲ್ಲಿ ಶೋಭಿತಾ ವೇಶ್ಯೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ಪಾತ್ರದ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಕಾಲ್ ಗರ್ಲ್ ಆಗಿ ನಟಿಸುವ ಬಗ್ಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದರು.

78

ಹಾಲಿವುಡ್ ಮಂಕಿ ಮ್ಯಾನ್ ಚಿತ್ರದಲ್ಲಿ ಶೋಭಿತಾ ವೇಶ್ಯೆಯ ಪಾತ್ರದಲ್ಲಿ ನಟಿಸಿದ್ದು ನನಗೆ ದೊಡ್ಡ ಗೌರವ ಎಂದು ಶೋಭಿತಾ ಹೇಳಿದ್ದಾರೆ. ಈ ಸಿನಿಮಾದಲ್ಲಿ ಅವರ ಪಾತ್ರ ಬಹಳ ಮಹತ್ವದ್ದಾಗಿದೆ ಎಂದಿದ್ದಾರೆ. ಜೊತೆಗೆ ಪಾತ್ರ ನನಗೆ ಖುಷಿಯನ್ನು ನೀಡಿದೆ ಎಂದಿದ್ದಾರೆ.
 

88

ಇನ್ನು ಪ್ರತಿ ವರ್ಷ ಕೇನ್ಸ್ ಚಲನಚಿತ್ರೋತ್ಸವವು ಸೆಲೆಬ್ರಿಟಿಗಳು, ಚಲನಚಿತ್ರ ನಿರ್ಮಾಪಕರು ಮತ್ತು ಸಿನಿಪ್ರಿಯರನ್ನು ಪಲೈಸ್ ಡೆಸ್ ಫೆಸ್ಟಿವಲ್ಸ್ ಎಟ್ ಡೆಸ್ ಕಾಂಗ್ರೆಸ್‌ನಲ್ಲಿ ಒಂದುಗೂಡಿಸುತ್ತದೆ. ಈ ವರ್ಷ ಐಶ್ವರ್ಯಾ ರೈ ಮತ್ತು ಅದಿತಿ ರಾವ್ ಹೈದರಿ, ಶೋಭಿತಾ ಧೂಳಿಪಾಲ, ಕಿಯಾರಾ ಅಡ್ವಾಣಿ, ಜಾಕ್ವೆಲಿನ್ ಫರ್ನಾಂಡಿಸ್ ಸೇರಿ ಭಾರತೀಯ ತಾರೆಯರು ಈ ಪ್ರತಿಷ್ಠಿತ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ.

Read more Photos on
click me!

Recommended Stories