ಅಣ್ಣಾವ್ರ ಜನ್ಮದಿನಲ್ಲಿ ಮಿಂದೆದ್ದ ಅಭಿಮಾನಿ ಬಳಗ, ಕಂಠೀರವ ಸ್ಟುಡಿಯೋದಲ್ಲಿ ವಿಶೇಷ ನಮನ

Apr 25, 2022, 11:12 AM IST

ಕನ್ನಡದ ಕಣ್ಮಣಿ, ಪರಂಪರೆಗಳನ್ನ ಸೃಷ್ಟಿಸಿದ ಶ್ರೇಷ್ಠ ಕಲಾವಿದ, ಕನ್ನಡ ಭಾಷೆಗೆ ನೆಲಕ್ಕೆ ಅದ್ಭುತ ಕೊಡುಗೆ ಕೊಟ್ಟ ಕರುನಾಡ ರತ್ನ ‌‌ರಾಜ್ ಕುಮಾರ್  94 ನೇ ಜನ್ಮದಿನ ಅದ್ಧೂರಿಯಾಗಿ ನಡೆಯಿತು. ಕೊರೊನಾದಿಂದ ಮೂರು ವರ್ಷ ರಾಜ್ ಕುಮಾರ್ ಹುಟ್ಟು ಹಬ್ಬಕ್ಕೆ ಬ್ರೇಕ್ ಬಿದ್ದಿತ್ತು‌. ಆದ್ರೆ ಈ ಬಾರಿ ಸಾಕಷ್ಟು ವಿಶೇಷವಾಗಿ ಅರ್ಥ ಗರ್ಭಿತವಾಗಿ ಆಚರಿಸಲಾಯ್ತು. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರೋ ಅಣ್ಣಾವ್ರ ಸಮಾಧಿಗೆ ಬಂದಿದ್ದ ಅಭಿಮಾನಿಗಳು ಹಾಗು ರಾಜ್ ಕುಟುಂಬ ಪೂಜೆ ಸಲ್ಲಿಸಿದ್ರು. 

Dr Rajkumar ಸರ್ಕಾರದಿಂದಲೇ ರಾಜ್ ಜನ್ಮದಿನ ಆಚರಣೆ, ಬೊಮ್ಮಾಯಿ ಘೋಷಣೆ!

ಅಣ್ಣಾವ್ರ ಹುಟ್ಟುಹಬ್ಬ ಆಗಿದ್ರಿಂದ ಕಂಠೀರವ ಸ್ಟುಡಿಯೋದಲ್ಲಿನ ರಾಜ್ ಸನಾಧಿಗೆ ವಿವಿಧ ಬಗೆಯ ಹೂವಗಳಿಂದ ಅಲಂಕಾರ ಮಾಡಲಾಗಿತ್ತು. ಮುತ್ತುರಾಜ್ ಕುಟುಂಬದವರು‌‌ ಸಮಾಧಿಗೆ ಪೂಜೆ ಸಲ್ಲಿಸಿ ಅಪ್ಪಾಜಿ‌ ನೆನಪಿನಂಗಳಕ್ಕೆ ಜಾರಿದರು. ಅಭಿಮಾನಿಗಳು ಗಾಜನೂರಿನಿಂದ ಕಾಲ್ನೆಡಿಗೆಯಲ್ಲಿ ತಂದಿದ್ದ ದೀಪವನ್ನ ಅಣ್ಣಾವ್ರ ಸಮಾಧಿಗೆ ಒಂದು ರೌಡ್ ಹಾಕಿದ ರಾಘವೇಂದ್ರ ರಾಜ್ ಕುಮಾರ್, ಅಭಿಮಾನಿಗಳು ಏರ್ಪಡಿಸಿದ್ದ ಅಣ್ಣಾವ್ರ ಬೆಳ್ಳಿರಥ ಯಾತ್ರೆಗೆ ಚಾಲನೆ ಕೊಟ್ರು. ಅಣ್ಣಾವ್ರ ಜನ್ಮದಿನದಂದು ಎಲ್ಲಿಯೂ ಇದ್ರೂ ಸಮಾಧಿಗೆ ಓಡಿ ಬರುತ್ತಿದ್ದ ಅಪ್ಪು ಇಲ್ಲದೇ ಅಪ್ಪಾಜಿ ಬರ್ತ್ಡೇಯನ್ನ ರಾಜ್ ಬಳಗ ಆಚರಿಸಬೇಕಾಯ್ತು. 

ರಾಜ್ಯದ ನಾನಾ ಭಾಗಗಳಿಂದ ಅಭಿಮಾನಿಗಳು ಬಂದು ರಾಜ್ ಸಮಾಧಿಗೆ ನಮಿಸಿದ್ರು. ಇದರ ಜೊತೆಗೆ ಪು‌ನೀತ್ ರ ಸಾಮಾಜಿಕ ಕಳಕಳಿ. ಕಲಾ ಸೇವೆ ಕುರಿತ ಶಕ್ತಿ ನಕ್ಷತ್ರ ಪುಸ್ತಕ ಬಿಡುಗಡೆ ಮಾಡಿದ್ರು. ಇನ್ನು ಇದೇ ವೇಳೆ ಇಂದು ರಾಜ್ ಕುಮಾರ್ ಸಮಾಧಿಗೆ ನವೀನ್ ಕುಮಾರ್ ಕಟೀಲ್ , ಸಚಿವ ಮುನಿರತ್ನ , ಗೋಪಾಲಯ್ಯ ಸೇರಿದಂತೆ ರಾಜಕಾರಣಿಗಳು ಆಗಮಿಸಿ ಪೂಜೆ ಸಲ್ಲಿಸಿದ್ರು. ಒಟ್ಟಿನಲ್ಲಿ ಕರೋನಾ ಕಾರಣಕ್ಕೆ ಮೂರು ವರ್ಷದಿಂದ ಅಪ್ಪಾಜಿ ಹುಟ್ಟು ಹಬ್ಬ ಆಚರಿಸದ ದೊಡ್ಮನೆ ಅಭಿಮಾಗಳು ಇಂದು ಮತ್ತೆ ಕಂಠೀರವ ಸಮಾಧಿ ಬಳಿ ಸಂಭ್ರಮಿಸಿದ್ದಾರೆ.