
ಚಿಕ್ಕಬಳ್ಳಾಪುರ(ನ.19): ಕಾಂಗ್ರೆಸ್‌ನವರು ದುರಹಂಕಾರದಿಂದ ಮೆರೆಯುತ್ತಿದ್ದಾರೆ. ಸಚಿವ ಜಮೀರ್ ಅಹಮದ್ ಖಾನ್ ದೇವೇಗೌಡರ ಬಗ್ಗೆ ಕೇವಲವಾಗಿ ಮಾತನಾಡುತ್ತಾರೆ. ಜೆಡಿಎಸ್ ನಾಯಕರಿಗೆ ಕರಿಯ ಅಂತ ಕರೆಯುತ್ತಾರೆ. ಇವರ ದುರಹಂಕಾರ ಮಿತಿಮೀರಿದೆ. ಕಾಂಗ್ರೆಸ್ ಸರ್ಕಾರ ರಕ್ತ ಹೀರುವ ಸರ್ಕಾರವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ ಹರಿಹಾಯ್ದಿದ್ದಾರೆ.
ಇಂದು(ಮಂಗಳವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಆರ್. ಅಶೋಕ್ ಅವರು, 12 ಲಕ್ಷ ರೇಷನ್ ಕಾರ್ಡ್ ಗಳನ್ನು ತೆಗೆದುಹಾಕುವ ಸಂಚು ಮಾಡುತ್ತಿದ್ದಾರೆ. ಬಡವರ ರೇಷನ್ ಕಾರ್ಡ್ ಗಳು ರದ್ದಾಗುತ್ತಿವೆ. ಸಿದ್ದರಾಮಯ್ಯ ಸರ್ಕಾರ ಬಡವರ ರಕ್ತವನ್ನು ಹೀರುವ ಸರ್ಕಾರ ಆಗಿದೆ. ರೆಷನ್ ಕಾರ್ಡ್ ರದ್ದು ಮಾಡುವುದನ್ನ ಕೂಡಲೇ ನಿಲ್ಲಿಸಬೇಕು. ರೇಷನ್ ಕಾರ್ಡ್ ಕೊಡೋವಾಗ ಅಧಿಕಾರಿಗಳು ಕತ್ತೆ ಕಾಯ್ತಿದ್ರಾ?. ಅರ್ಹರಿಗೆ ಬಿಪಿಎಲ್ ಕಾರ್ಡ್ ಕೊಟ್ಟಿದ್ದೀರಾ ಹಾಗಾದರೆ ಅಂತಹ ಅಧಿಕಾರಿಗಳನ್ನ ಕೂಡಲೇ ಸಸ್ಪೆಂಡ್ ಮಾಡಿ ಎಂದು ಆಗ್ರಹಿಸಿದ್ದಾರೆ.
ಬಹಿರಂಗವಾಗಿ ಹಣ ಹಂಚುವ ಕಾಂಗ್ರೆಸ್‌ಗೆ ಸಾಕ್ಷಿಗುಡ್ಡೆ ಬೇಕಾ?: ಅಶೋಕ್ ಕಿಡಿ
ಸಿದ್ದರಾಮಯ್ಯ ಸುಳ್ಳು ರಾಮಯ್ಯ ಆಗಿದ್ದಾರೆ. ಸಿದ್ದರಾಮಯ್ಯ ಸಾಬರ ಚಾಂಪಿಯನ್ ಆಗಲು ಹೊರಟಿದ್ದಾರೆ. ಅಹಿಂದ ನಾಯಕ ಎನ್ನುತ್ತಿದ್ದರು, ಈಗ ಹಿಂದ ತೆಗೆದು ಬರೀ ಅಲ್ಪಸಂಖ್ಯಾತರರ ನಾಯಕ ಎನಿಸಿಕೊಳ್ಳಲು ಹೊರಟಿದ್ದಾರೆ. ಮುಡಾ ಸೈಟ್ ಗಳನ್ನ ವಾಪಸ್ ಕೊಡಲ್ಲ ಅಂದ್ರು ಆದರೆ ನಂತರ ವಾಪಸ್ ಕೊಟ್ಟರು ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ ಕೆಂಡ ಕಾರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.