Sep 4, 2019, 5:53 PM IST
ಈ ಹಿರಿ ಜೀವದ ಹೆಸರು ಮುಹಮ್ಮದ್ ಶರೀಫ್. ಫೈಝಬಾದ್ ರೈಲ್ವೆ ನಿಲ್ದಾಣದ ಪಕ್ಕದ ಗಲ್ಲಿಯೊಂದರಲ್ಲಿ ಸೈಕಲ್ ರಿಪೇರಿ ಕೆಲಸ ಮಾಡ್ತಾ ತನ್ನ ಮತ್ತು ಹೆಂಡತಿ ಮಕ್ಕಳ ಹೊಟ್ಟೆ ತುಂಬಿಸುವ ಇವರು ಊರಲ್ಲೆಲ್ಲಾ ಶರೀಫ್ ಚಾಚಾ ಎಂದೇ ಪ್ರಖ್ಯಾತ. ಪಟ್ಟಣ ಮತ್ತು ಊರಲ್ಲಿ ಸರ್ವಧರ್ಮೀಯರು ಗೌರವಿಸುವ ಈ ಶರೀಫ್ ಚಾಚಾ ಕಳೆದ 20 ವರ್ಷಗಳಿಂದ ಮಾಡುತ್ತಿರುವ ಮಹಾನ್ ಸೇವೆಯೊಂದರ ಮೂಲಕ ಗುರುತಿಸಲ್ಪಟ್ಟಿದ್ದಾರೆ.