Jan 7, 2021, 10:28 PM IST
ವಿಜಯಪುರ, (ಜ.07): ವಿಜಯಪುರ ಜಿಲ್ಲೆ ತಿಕೋಟ ಪಟ್ಟಣದ ಯುವಕನೊಬ್ಬ ಸಾರ್ಥಕ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾನೆ. ತನ್ನ 29 ನೇ ಹುಟ್ಟು ಹಬ್ಬದ ನಿಮಿತ್ಯ ತಾನು ಕಲಿತ ಸರ್ಕಾರಿ ಶಾಲೆಗೆ ಸುಣ್ಣ ಬಣ್ಣ ಮಾಡುವ ಮೂಲಕ ಸರ್ಕಾರಿ ಶಾಲೆಯ ಬಗ್ಗೆ ಕಾಳಜಿ ತೊರಿದ್ದಾನೆ.
ಹೌದು.. ವಿಜಯಪುರ ಜಿಲ್ಲೆಯ ತಿಕೋಟಾದ ಶ್ರೀರಾಮ (ಆಶ್ರಯ) ಕಾಲನಿ ನಿವಾಸಿ ಸುರೇಶ ಕೊಣ್ಣೂರ ಎಂಬ ಯುವಕ ತಮ್ಮದೇ ಕಾಲನಿಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 20 ಸಾವಿರ ವೆಚ್ಚದಲ್ಲಿ ಸುಣ್ಣ ಬಣ್ಣ ಮಾಡುವ ಮೂಲಕ ಹುಟ್ಟು ಹಬ್ಬವನ್ನ ಸಾರ್ಥಕ ಅನ್ನೋ ರೀತಿಯಲ್ಲಿ ಆಚರಿಕೊಂಡಿದ್ದಾನೆ.