ಉಡುಪಿ: ಅಗಲಿದ ಅಮ್ಮನ ನೆನಪನ್ನು ಶಾಶ್ವತವಾಗಿಸಲು ಮಕ್ಕಳು ಮಾಡಿದ ಕೆಲಸವೇನು ನೋಡಿ..!

Sep 6, 2021, 10:19 AM IST

ಉಡುಪಿ (ಸೆ. 06): ಇಲ್ಲಿನ ಕಾಪು ಮೂಲದ ಗೀತಾ ಯಾದವ್, ಮುಂಬೈ ಮಹಾನಗರ ಪಾಲಿಕೆಯ ಕಾರ್ಪೋರೇಟರ್ ಆಗಿದ್ದವರು.  ಮುಂಬೈಗೆ ಕೊರೋನಾ ಅಪ್ಪಳಿಸಿದಾಗ ಸೇನಾನಿಯಂತೆ ಮುಂದೆ ನಿಂತು ದುಡಿದಿದ್ರು. ಮುಂಬೈ ನಗರದ ಅಂದೇರಿ ವೆಸ್ಟ್‌ನ ಜನರು ಗೀತಾ ಅವರ ಸೇವೆಯನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ. ಹೃದಯ ಚಿಕಿತ್ಸೆಗೆ ನೆರವು, ಉಚಿತ ಮೆಡಿಸಿನ್, ಕ್ಯಾಟರ್ಯಾಕ್ಟ್ ಆಪರೇಷನ್, ರಕ್ತದಾನ ಶಿಬಿರಗಳ ಆಯೋಜನೆ, ಬಡತನದಲ್ಲಿರುವ ಮಹಿಳೆಯರಿಗೆ ಪ್ರತಿದಿನ ಉಚಿತ ರೇಷನ್, ಬಡ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಸಹಾಯ ಮಾಡಿದರು.

ಉಸಿರಿನ ಕೊನೆಯ ಕ್ಷಣದವರೆಗೂ ಕೋರೋನಾ ವಾರಿಯರ್ ರೀತಿಯಲ್ಲಿ ಕ್ಷೇತ್ರದ ಜನತೆಗಾಗಿ ಅವರು ಕೆಲಸ ಮಾಡಿದ್ದರು.  ಕೊನೆಗಾಲದಲ್ಲಿ ಊರಲ್ಲಿ ನೆಲೆಸಬೇಕು. ಕರಾವಳಿಯ ಬಂಧುಗಳ ಒಡನಾಟದಲ್ಲಿ ಉಳಿದ ಜೀವನ ಕಳೆಯಬೇಕೆಂದು ಬಯಸಿದ್ದರು. ಆದರೆ ವಿಧಿಯಾಟ, ವರ್ಷದ ಹಿಂದೆ ಇಹಲೋಕ ತ್ಯಜಿಸಿದರು. ಅವರ ಈ ಆಸೆಯನ್ನು ಈಡೇರಿಸಲು ಮಕ್ಕಳು ಮಾಡಿದ ಕೆಲಸವೇನು ನೋಡಿ..!