Cricket
ಗೊಂಬೆಯಂತೆ ಕಾಣುವ ಈ ಮುದ್ದು ಮಗು ಮುಂದೊಂದು ದಿನ ಇಡೀ ಕ್ರಿಕೆಟ್ ಜಗತ್ತು ಕೊಂಡಾಡುತ್ತೆ ಎಂದು ಯಾರೂ ಊಹಿಸಿರಲಾರರು.
ಈ ಹಳೆಯ ಚಿತ್ರವನ್ನು ಗಮನಿಸಿ. ಮೂರು ಮಕ್ಕಳು ಈ ಚಿತ್ರದಲ್ಲಿ ಪೋಸ್ ನೀಡುತ್ತಿದ್ದಾರೆ. ಇವರಲ್ಲಿ ಒಬ್ಬರು ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್.
ಈ ಬಾಲ್ಯದ ಚಿತ್ರದಲ್ಲಿ ಈ ಕ್ರಿಕೆಟಿಗ ಆಟಿಕೆ ಬಂದೂಕು ಹಿಡಿದು ಪೋಸ್ ನೀಡುತ್ತಿದ್ದಾರೆ. ದೊಡ್ಡವರಾದ ಮೇಲೆ ಬ್ಯಾಟ್ ಹಿಡಿದು ದೊಡ್ಡ ದೊಡ್ಡ ಸಿಕ್ಸರ್ಗಳನ್ನು ಹೊಡೆಯುತ್ತಾರೆ ಎಂದು ಯಾರಿಗೆ ತಿಳಿದಿತ್ತು?
ಈ ಕ್ರಿಕೆಟಿಗರ ಅಡ್ಡಹೆಸರು ಕೂಡ ಅವರಂತೆಯೇ ತುಂಬಾ ಮುದ್ದಾಗಿದೆ. ವಾಸ್ತವವಾಗಿ, ಅವರ ಕೋಚ್ ಅಜಿತ್ ಚೌಧರಿ ಅವರಿಗೆ ಚೀಕು ಎಂಬ ಅಡ್ಡ ಹೆಸರನ್ನು ನೀಡಿದ್ದರು.
2006 ರಲ್ಲಿ ಈ ಕ್ರಿಕೆಟಿಗ ಕರ್ನಾಟಕದ ವಿರುದ್ಧ ರಣಜಿ ಟ್ರೋಫಿ ಪಂದ್ಯವನ್ನು ಆಡುತ್ತಿದ್ದಾಗ, ಅವರ ತಂದೆ ನಿಧನರಾದರು, ಆದರೆ ಅದರ ನಂತರವೂ ಅವರು ಪಂದ್ಯವನ್ನು ಪೂರ್ಣಗೊಳಿಸಿದರು.
ಈ ಕ್ರಿಕೆಟಿಗರನ್ನು ರನ್ ಮೆಷಿನ್ ಎಂದು ಕರೆಯಲಾಗುತ್ತದೆ, ಏಕೆಂದರೆ ಅವರು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತಿ ವೇಗವಾಗಿ 10,000 ರನ್ ಗಳಿಸಿದ್ದಾರೆ.
ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 100 ಶತಕಗಳನ್ನು ಗಳಿಸಿದ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ, ಆದರೆ 2ನೇ ಸ್ಥಾನದಲ್ಲಿ 73 ಶತಕಗಳೊಂದಿಗೆ ಈ ಸ್ಟಾರ್ ಕ್ರಿಕೆಟಿಗ ಇದ್ದಾರೆ. ಈಗ ನೀವು ಯಾರು ಎಂದು ಊಹಿಸಿರಬಹುದು?
ಈ ಬಾಲ್ಯದ ಚಿತ್ರಗಳಲ್ಲಿ ತಮ್ಮ ಮುದ್ದಾದ ನೋಟದಿಂದ ಎಲ್ಲರ ಹೃದಯವನ್ನು ಗೆದ್ದ ಈ ಕ್ರಿಕೆಟಿಗ ಬೇರೆ ಯಾರೂ ಅಲ್ಲ, ವಿರಾಟ್ ಕೊಹ್ಲಿ, ಈ ಚಿತ್ರಗಳಲ್ಲಿ ತುಂಬಾ ಮುದ್ದಾಗಿ ಕಾಣುತ್ತಿದ್ದಾರೆ.