ವ್ಯಕ್ತಿಗೆ ಬೈದಿದ್ದೇನೆ, ಕುರುಬ ಸಮುದಾಯವನ್ನಲ್ಲ, ಕ್ಷಮೆ ಇರಲಿ: ಸುರೇಶ್ ಗೌಡ

Jun 20, 2019, 3:41 PM IST

ತುಮಕೂರು (ಜೂ.20): ಪೊಲೀಸ್ ಇಲಾಖೆ ಟೀಕಿಸುವ ಭರದಲ್ಲಿ ತುಮಕೂರು ಗ್ರಾಮಾಂತರ ಬಿಜೆಪಿ ಮಾಜಿ ಶಾಸಕ ಬಿ. ಸುರೇಶ್ ಗೌಡ, ಪೇದೆಯ ಜಾತಿ ನಿಂದನೆ ಮಾಡಿರುವ ವಿಡಿಯೋ ವೈರಲ್ ಆಗಿತ್ತು. 

ಕುರುಬ ಸಮುದಾಯವನ್ನು ನಿಂದಿಸಿರುವ ಸುರೇಶ್ ಗೌಡ ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ಪ್ರತಿಭಟನೆ ಕೂಡಾ ನಡೆಯಿತು.

ಈ ಹಿನ್ನೆಲೆಯಲ್ಲಿ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುರೇಶ್ ಗೌಡ, ವ್ಯಕ್ತಿಗೆ ಬೈದಿದ್ದೇನೆ, ಕುರುಬ ಸಮುದಾಯವನ್ನಲ್ಲ ಎಂದು ಸ್ಪಷ್ಟನೆ ನೀಡಿದರು. ನನ್ನ ಹೇಳಿಕೆಯಿಂದ ಯಾರಿಗಾದರು ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ, ಎಂದರು.