ಕರ್ಫ್ಯೂನಿಂದಾಗಿ ಬೀದಿಗೆ ಬಂದ ರಂಗಭೂಮಿ ಕಲಾವಿದರು: ಕಣ್ಣೀರಿಟ್ಟು ಅಳಲು ತೋಡಿಕೊಂಡ ಆರ್ಟಿಸ್ಟ್ಸ್!

Jan 15, 2022, 2:34 PM IST

ಬೆಳಗಾವಿ (ಜ. 15): ಕೊರೋನಾ ಸೋಂಕು ಹತೋಟಿಗೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ತಿಂಗಳಾಂತ್ಯದವರೆಗೂ ನಿತ್ಯ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದಲ್ಲಿ ದಿನಪೂರ್ತಿ (ಸತತ 55 ಗಂಟೆ) ಕರ್ಫ್ಯೂ (Curfew) ಜಾರಿಗೊಳಿಸುತ್ತಿದೆ.  ಹೀಗಾಗಿ ತುರ್ತು ಸಂದರ್ಭ ಹೊರತುಪಡಿಸಿ ಇತರೆ ಎಲ್ಲಾ ಚಟುವಟಿಕೆಗಳಿಗೆ ನಿರ್ಬಂಧವಿರಲಿದೆ. ಕೊರೋನಾ ಕರ್ಫ್ಯೂದಿಂದಾಗಿ ಹಬ್ಬ ಹರಿದಿನಗಳ ಸಂಭ್ರಮಾಚರಣೆ, ಜಾತ್ರೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬ್ರೇಕ್‌ ಬಿದ್ದಿದೆ.  ಕೋವಿಡ್‌ನಿಂದ ಕಾರ್ಯಕ್ರಮ ಆಯೋಜನೆಗೆ ಅನುಮತಿ ಸಿಗದೇ ವೃತ್ತಿರಂಗಭೂಮಿ ಸೇರಿ ವಿವಿಧ ಕಲಾವಿದರು ಬೀದಿಗೆ ಬಂದಿದ್ದಾರೆ.

ಇದನ್ನೂ ಓದಿ: Weekend Curfew: ಕ್ಯಾರೇ ಎನ್ನದ ಬಳ್ಳಾರಿ ಜನ, ಎಪಿಎಂಸಿ ಮಾರುಕಟ್ಟೆಯಲ್ಲಿ ಜನ ಜಾತ್ರೆ 

ಈ ಬೆನ್ನಲ್ಲೇ ರಂಗ ಕಲಾವಿದರು ರಾತ್ರಿ 10 ಗಂಟೆಯವರೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಬೆಳಗಾವಿ (Belagvai) ಡಿಸಿ ಕಚೇರಿ ಎದುರು ಧರಣಿ ನಡೆಸಿದ್ದಾರೆ. ಹಾಸ್ಯ ಕಲಾವಿದ ಸಂಜು ಬಸಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು ಏಷ್ಯಾನೆಟ್ ಸುವರ್ಣನ್ಯೂಸ್ ಬಳಿ  ಸಂಜು‌ ಬಸಯ್ಯ ಅಳಲು ತೋಡಿಕೊಂಡಿದ್ದಾರೆ. " ಲಕ್ಷಾಂತರ ರೂಪಾಯಿ ಸಾಲ ಮಾಡಿ ಬಂಡವಾಳ ಹಾಕಿದ್ದೇವೆ. ಕಾರ್ಯಕ್ರಮಗಳು ನಡೆಯದೇ ಇದ್ದರೆ ಸಾಲ ತುಂಬಲು ಆಗಲ್ಲ. ಸರ್ಕಾರದ ವತಿಯಿಂದ ನಯಾಪೈಸೆ ಪರಿಹಾರ ಬಂದಿಲ್ಲ. ರಾತ್ರಿ 10 ಗಂಟೆಯವರೆಗೆ ಅವಕಾಶ ಕೊಟ್ರೆ ಕಲಾವಿದರಿಗೆ ಅನುಕೂಲ" ಎಂದು ಹೇಳಿದ್ದಾರೆ.