ಭಾರತದಲ್ಲಿ ಅತ್ಯಂತ ಹೆಚ್ಚು ಜನರ ಪ್ರಯಾಣದ ಸಂಗಾತಿ ರೈಲು. ಹಾಗಾಗಿಯೇ ಅಲ್ಲಿ ಟಿಕೆಟ್ ಸಿಗೋದೇ ಕಷ್ಟ. ಆನ್ಲೈನ್ ಬುಕ್ಕಿಂಗ್ ಸುಲಭವಾಗಿದ್ರು ಎಲ್ಲವನ್ನು ನಂಬೋದು ಕಷ್ಟ ಎನ್ನುವವರಿಗೆ ವಿಶ್ವಾಸಾರ್ಹ ಅಪ್ಲಿಕೇಷನ್ ಪಟ್ಟಿ ಇಲ್ಲಿದೆ.
ಬಸ್, ರೈಲು ಸೇರಿದಂತೆ ವಿಮಾನ ಟಿಕೆಟ್ ಗಳನ್ನು ಬುಕ್ ಮಾಡೋದು ಈಗ ಸಲುಭ. ರೈಲ್ವೆ ನಿಲ್ದಾಣಕ್ಕೆ ಹೋಗಿ, ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಬುಕ್ (tickets Book) ಮಾಡುವ ಕಾಲ ಈಗಿಲ್ಲ. ಜನರು ಆನ್ಲೈನ್ನಲ್ಲಿಯೇ ಟಿಕೆಟ್ ಬುಕ್ ಮಾಡ್ತಾರೆ. ರೈಲ್ವೆ ಟಿಕೆಟ್ ಬುಕ್ ಮಾಡ್ಬೇಕು ಅಂದ್ರೆ ಪ್ರಯಾಣಿಕರು ವಿಶ್ವಾಸಾರ್ಹ ಅಪ್ಲಿಕೇಶನ್ (trusted app) ಮೊರೆ ಹೋಗ್ತಾರೆ. ನಂಬಿಕೆ ಅರ್ಹವಾದ, ಅತಿ ಶೀಘ್ರದಲ್ಲಿ ಟಿಕೆಟ್ ಬುಕ್ ಆಗುವ ಹಾಗೆಯೇ ಟಿಕೆಟ್ ಬುಕ್ ಮಾಡುವ ಪ್ರಕ್ರಿಯೆ ಸುಲಭವಾಗಿರುವ ಅಪ್ಲಿಕೇಷನ್ಗಳನ್ನು ಜನರು ನಂಬ್ತಾರೆ, ಬಳಸ್ತಾರೆ. ಅತ್ಯುತ್ತಮ ರೈಲು ಟಿಕೆಟ್ ಬುಕಿಂಗ್ ಅಪ್ಲಿಕೇಶನ್ (train ticket booking app) ಅಂದಾಗ ಜನರು ಐಆರ್ಸಿಟಿಸಿ (IRCTC)ಗೆ ಮೊದಲ ಆದ್ಯತೆ ನೀಡ್ತಾರೆ. ಐಆರ್ಸಿಟಿಸಿ ಮಾತ್ರವಲ್ಲ ಇನ್ನೂ ಕೆಲ ನಂಬಿಕರ್ಹ ಅಪ್ಲಿಕೇಷನ್ಗಳಿವೆ. ಅದ್ರ ಮೂಲಕ ನೀವು ಟಿಕೆಟ್ ಬುಕ್ ಮಾಡ್ಬಹುದು.
ಐಆರ್ಸಿಟಿಸಿ : ಐಆರ್ಸಿಟಿಸಿ ರೈಲ್ ಕನೆಕ್ಟ್ ಅಪ್ಲಿಕೇಶನ್ ಭಾರತೀಯ ರೈಲ್ವೆಯ ಅಧಿಕೃತ ಅಪ್ಲಿಕೇಶನ್ ಆಗಿದೆ. ಇದರಲ್ಲಿ ನೀವು ತ್ವರಿತ ಬುಕಿಂಗ್, ಸೀಟ್ ಆಯ್ಕೆ, ರೈಲು ವೇಳಾಪಟ್ಟಿ ಸೇರಿದಂತೆ ಅನೇಕ ಸೌಲಭ್ಯಗಳು ಈ ಅಪ್ಲಿಕೇಷನ್ನಲ್ಲಿ ನಿಮಗೆ ಸಿಗಲಿವೆ. ಈ ಅಪ್ಲಿಕೇಷನ್ ಸುರಕ್ಷಿತವಾಗಿದ್ದು, ಇದನ್ನು ಬಳಸುವುದು ಸರಳ ಹಾಗೂ ಸುಲಭ.
undefined
ಇದು ಭಾರತದ ಮೊದಲ ಇಂಜಿನ್ ರಹಿತ ರೈಲು; ಗಂಟೆಗೆ 183 km ವೇಗದಲ್ಲಿ ಚಲಿಸೋ
ಮೇಕ್ ಮೈ ಟ್ರಿಪ್ (MakeMyTrip) : ಆನ್ಲೈನ್ನಲ್ಲಿ ಟಿಕೆಟ್ ಬುಕಿಂಗ್ ಮಾಡುವ ಪ್ರಯಾಣಿಕರಿಗೆ ಮೇಕ್ಮೈ ಟ್ರಿಪ್ ಬಹಳಷ್ಟು ಅನುಕೂಲಕರವಾಗಿದೆ. ಮೇಕ್ಮೈ ಟ್ರಿಪ್ ಮೂಲಕ ಪ್ರಯಾಣಿಕರು ರೈಲು, ವಿಮಾನ, ಬಸ್ ಮಾತ್ರವಲ್ಲದೆ ಹೋಟೆಲ್ ಟಿಕೆಟ್ ಕೂಡ ಬುಕಿಂಗ್ ಮಾಡಬಹುದಾಗಿದೆ. ಒಂದೇ ವೇದಿಕೆಯಲ್ಲಿ ಎಲ್ಲ ಟಿಕೆಟ್ ಬುಕ್ ಮಾಡುವ ಸೌಲಭ್ಯ ಇದ್ರಲ್ಲಿದೆ. ಈ ಅಪ್ಲಿಕೇಷನ್ನಲ್ಲಿ ನೀವು ಟಿಕೆಟ್ ಬುಕ್ ಮಾಡಿದ್ರೆ ವಿಶೇಷ ಉಡುಗೊರೆ ಜೊತೆ ರಿಯಾಯಿತಿಯನ್ನು ನೀವು ಪಡೆಯಬಹುದು. ಇದು ಪ್ರಯಾಣ ವಿಮೆಯ ಸೌಲಭ್ಯವನ್ನು ಒದಗಿಸುತ್ತದೆ.
ಪೇಟಿಎಂ : ಆನ್ಲೈನ್ ಪೇಮೆಂಟ್ ಹಾಗೂ ಬುಕ್ಕಿಂಗ್ ಗೆ ಪ್ರಸಿದ್ಧವಾಗಿರುವ ಪೇಟಿಎಂ ಮೂಲಕವೂ ನೀವು ಟಿಕೆಟ್ ಬುಕ್ ಮಾಡಬಹುದು. ಈ ಅಪ್ಲಿಕೇಷನ್ ನಿಮಗೆ ಕ್ಯಾಶ್‌ಬ್ಯಾಕ್ ಆಫರ್ ಮತ್ತು ಕನ್ಫರ್ಮೇಷನ್ ಪ್ರಿಡಿಕ್ಷನ್‌ನಂತಹ ವೈಶಿಷ್ಟ್ಯವನ್ನು ನೀಡುತ್ತದೆ. ಇದರ ಬಳಕೆ ಕೂಡ ಬಹಳ ಸುಲಭ. ವಾಲೆಟ್ನಿಂದ ನೇರವಾಗಿ ಹಣ ಪಾವತಿ ಮಾಡುವ ಅವಕಾಶ ಇಲ್ಲಿರುವ ಕಾರಣ ನೀವು, ಅತಿ ವೇಗವಾಗಿ ಟಿಕೆಟ್ ಬುಕ್ ಮಾಡಬಹುದಾಗಿದೆ.
ಗೋಯಿಬಿಬೋ (Goibibo) : ರೈಲು ಟಿಕೆಟ್ ಬುಕಿಂಗ್‌ಗೆ ಜನಪ್ರಿಯ ಅಪ್ಲಿಕೇಶನ್ ಗಳಲ್ಲಿ ಗೋಯಿಬಿಬೋ ಕೂಡ ಒಂದು. ಟಿಕೆಟ್ ಬುಕ್ಕಿಂಗ್ ಮಾತ್ರವಲ್ಲದೆ ನೀವು, ರೈಲಿನ್ ಟೈಂ ಟೇಬಲ್
ರೈಲ್ವೆ ನಿಲ್ದಾಣದಲ್ಲಿ ಏರ್‌ಪೋರ್ಟ್ ಮಾದರಿ ಫೆಸಿಲಿಟಿ; ಸ್ಲೀಪಿಂಗ್ ಪಾಡ್ ಬಗ್ಗೆ ನಿಮಗೆಷ್ಟು ಗೊತ್ತು?
ಕನ್ಫರ್ಮ್ ಟಿಕೆಟ್ (ConfirmTkt) : ರೈಲ್ವೆ ಟಿಕೆಟ್ ಬುಕ್ ಮಾಡಲು ನೀವು ಈ ಅಪ್ಲಿಕೇಷನ್ ಕೂಡ ಬಳಸಬಹುದು. ಇದು ನಿಮ್ಮ ಟಿಕೆಟ್ ವೇಯ್ಟ್‌ಲಿಸ್ಟ್ ಆಗಿದ್ದರೆ, ನಿಮ್ಮ ಟಿಕೆಟ್ ದೃಢೀಕರಿಸುವ ಸಂಭವನೀಯತೆಯನ್ನು ಅಂದಾಜು ಮಾಡುತ್ತದೆ. ತತ್ಕಾಲ್ ಟಿಕೆಟ್ ಬುಕ್ಕಿಂಗ್ಗೆ ಇದು ಅವಕಾಶ ನೀಡುತ್ತದೆ.
ಅಪ್ಲಿಕೇಷನ್ ಬಳಕೆ ವೇಳೆ ಎಚ್ಚರ : ಆನ್ಲೈನ್ ಮೋಸದ ಸಂಖ್ಯೆ ಈಗಿನ ದಿನಗಳಲ್ಲಿ ಹೆಚ್ಚಾಗಿದೆ. ನೀವು ಯಾವುದೇ ಅಪ್ಲಿಕೇಷನ್ ಡೌನ್ಲೋಡ್ ಮಾಡುವ ಮುನ್ನ ಮೈ ಎಲ್ಲ ಕಣ್ಣಾಗಿರಲಿ. ಅಧಿಕೃತ ಅಪ್ಲಿಕೇಷನ್ ಮಾತ್ರ ಡೌನ್ಲೋಡ್ ಮಾಡಿ, ಪಾವತಿ ಮಾಡಿ.