Cover Story: ಮಂಡ್ಯದ ಶ್ರೀರಂಗಪಟ್ಟಣದಲ್ಲಿರೋದು ಮಂದಿರವೋ, ಮಸೀದಿಯೋ? ಇಲ್ಲಿದೆ ಎಕ್ಸ್‌ಕ್ಲ್ಯೂಸಿವ್‌ ಸ್ಟೋರಿ

Jun 6, 2022, 10:41 PM IST

ಮಂಡ್ಯ (ಜೂ. 06): ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ, ಕಾಶಿಯಲ್ಲಿ ಜ್ಞಾನವ್ಯಾಪಿ ಮಸೀದಿ, ಕೃಷ್ಣ ಜನ್ಮಭೂಮಿ ಮಥುರಾದಲ್ಲಿ ಶಾಹಿ ಈದ್ಗಾ ಮಸೀದಿ, ಇದೆಲ್ಲವೂ ಇರೋದು ಉತ್ತರಪ್ರದೇಶದಲ್ಲಿ. ಇದೇ ರೀತಿ ವಿವಾದವೊಂದು ನಮ್ಮ ರಾಜ್ಯದಲ್ಲೂ ಭುಗಿಲೆದ್ದಿದ್ದು, ಜಾಮಿಯಾ ಮಸೀದಿ ವಿವಾದ ದಿನಕ್ಕೊಂದು ರೋಚಕ ತಿರುವನ್ನು ಪಡೆದುಕೊಳ್ಳುತ್ತಿದೆ. ಜಾಮೀಯಾ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಸದ್ಯ ಕಾನೂನು ಹೋರಾಟಕ್ಕೆ ಹಿಂದೂ ಸಂಘಟನೆಗಳು ಸಿದ್ಧತೆ ನಡೆಸುತ್ತಿವೆ.

ಇದನ್ನೂ ಓದಿSrirangapatna Jamia Masjid Row; ದಶಕಗಳ ಹಿಂದಿನ ಪುಸ್ತಕದಲ್ಲಿ ಟಿಪ್ಪು ಕೆಡವಿರುವ ಉಲ್ಲೇಖ

ಈ  ನಡುವೆ ಮೂಡಲಬಾಗಿಲು ಆಂಜನೇಯಸ್ವಾಮಿ ದೇಗುಲದಿಂದ ಟಿಪ್ಪು ಸೇನೆ ದೋಚಿದ್ದ ಏಳು ಕೊಪ್ಪರಿಗೆ ಹಣದಿಂದ ಈ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗಿದ್ದು, ಲೇಖಕ ವಿದ್ವಾನ್‌ ಬಾಲಗಣಪತಿ ಭಟ್ಟಬರೆದಿರುವ ‘ಮೂಡಲಬಾಗಿಲು ಶ್ರೀಆಂಜನೇಯ ಸುಪ್ರಭಾತ’ ಎಂಬ ಕಿರು ಪುಸ್ತಕದಲ್ಲಿ ಈ ಸಂಗತಿಯನ್ನು ಉಲ್ಲೇಖಿಸಲಾಗಿದೆ. ಕರ್ನಾಟಕದ ಜ್ಞಾನವ್ಯಾಪಿಯಾಗಲಿರುವ ಶ್ರೀರಂಗಪಟ್ಟಣದ ಜಾಮೀಯಾ ಮಸೀದಿ ವಿವಾದದ ಸಂಪೂರ್ಣ ಅನಾವರಣ ಕವರ್‌ ಸ್ಟೋರಿಯಲ್ಲಿ