ಗ್ರಾಮಗಳ ಗೋಮಾಳವನ್ನು ಗೋವುಗಳಿಗೆ ಬಿಡಿ : ಪೇಜಾವರ ಶ್ರೀ

Oct 7, 2021, 3:18 PM IST

ಉಡುಪಿ (ಅ.07): ಹಿಂದೆ ಗ್ರಾಮಗಳಲ್ಲಿ ಗೋವುಗಳ ಮೇವಿಗಾಗಿ ಗೋಮಾಳದ ಜಾಗದಲ್ಲಿ ಮೇವುಗಳು ಯಥೇಚ್ಛವಾಗಿ ಸಿಗ್ತಾ ಇತ್ತು. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಗೋಮಾಳ ಜಾಗ ಪರಭಾರೆ ಆಗ್ತೀದೆ. ಕೆಲ ಗ್ರಾಮದಲ್ಲಿ ಗೋಮಾಳದ ಜಾಗ ಬೇರೆಬೇರೆ ಉದ್ದೇಶಕ್ಕೆ ಬಳಕೆಯಾಗುತ್ತಿದೆ. ಹೀಗಾಗಿ, ಗೋಮಾಳ ಜಾಗವನ್ನು ಊರಿನಲ್ಲಿ ಗೋ ಸಾಕಣೆ ಮಾಡುವವರಿಗೆ, ಗೋಶಾಲೆಗಳಿಗೆ ನೀಡಬೇಕು ಅಂತ ಪೇಜಾವರ ವಿಶ್ವ ಪ್ರಸನ್ನ ತೀರ್ಥರು ಆಗ್ರಹಿಸಿದ್ದಾರೆ. ಬ್ರಿಟೀಷರ ಕಾಲದಲ್ಲೂ ಗೋಮಾಳ ಗೋಮಾಳ ಆಗಿಯೇ ಉಳಿದಿತ್ತು.‌ಆದ್ರೆ ನಂತರದಲ್ಲಿ ಗೋಮಾಳ ಬೇರೇ ಉದ್ದೇಶ ಯಾಕೆ ಬಳಸಲಾಗುತ್ತಿದೆ ಅಂತ ಸರ್ಕಾರವನ್ನು ಪ್ರಶ್ನಿಸಿದ್ದಾರೆ

ಗೋವು, ಪಶುಸಂಗೋಪನೆ ಇನ್ನು ಶಾಲಾ ಪಠ್ಯ?

 ಉಡುಪಿ ಜಿಲ್ಲೆಯೊಂದರಲ್ಲೇ  233 ಗ್ರಾಮಗಳಲ್ಲಿ 3 ಸಾವಿರ ಎಕರೆ ಗೋಮಾಳದ ಭೂಮಿಗಳಿದೆ, ಇದನ್ನು ಆಯಾ ಗೋವುಗಳ ರಕ್ಷಣೆಗಾಗಿ, ಹಾಗೂ ಗೋವುಗಳ ಪಾಲನೆಗಾಗಿ ನೀಡಬೇಕು ಅಂತ  ಗೋ ಹಿತರಕ್ಷಣಾ ಒಕ್ಕೂಟ ಒತ್ತಾಯಿಸಿದೆ.  ಗ್ರಾಮಗಳ ಗೋಮಾಳಗಳನ್ನು  ಗೋವುಗಳ ಪಾಲನೆ, ಮೇವಿನ ಉದ್ದೇಶಕ್ಕೆ ವ್ಯವಸ್ಥಿತವಾಗಿ ನೀಡಲು ಯೋಜನೆ ರೂಪಿಸಿದೆ. ಪೇಜಾವರ ಶ್ರೀಗಳ ಮಾರ್ಗದರ್ಶನದಲ್ಲಿ ಒಕ್ಕೂಟ ಕಾರ್ಯಪ್ರವೃತವಾಗಿದೆ.